Breaking News

ದಾವಣಗೆರೆ: ಉಡುಗೊರೆ ನೆಪದಲ್ಲಿ ₹ 47 ಲಕ್ಷ ವಂಚನೆ

ವಿದ್ಯಾನಗರದ ನಿವಾಸಿಗೆ ಆರೋಪಿ ಡಾ.ನೀಲ್‌ ಆಶ್ಲೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತನಾಗಿದ್ದ. ಸ್ಕಾಟ್‌ಲೆಂಡ್‌ನಲ್ಲಿ ವೈದ್ಯನಾಗಿರುವುದಾಗಿ ಮಹಿಳೆಯ ವಿಶ್ವಾಸ ಗಳಿಸಿದ್ದ. ಮಹಿಳೆಯ ಪುತ್ರನ ಜನ್ಮದಿನಕ್ಕೆ ಬೆಲೆಬಾಳುವ ಉಡುಗೊರೆ ಕಳುಹಿಸುವುದಾಗಿ ನಂಬಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಅ.17ರಂದು ಮಹಿಳೆಗೆ ಕರೆ ಮಾಡಿದವರು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಎಂಬುದಾಗಿ ಪರಿಚಯ ಮಾಡಿಕೊಂಡಿದ್ದರು. ವಿದೇಶದಿಂದ ದುಬಾರಿ ಗಿಫ್ಟ್‌ಬಾಕ್ಸ್‌ ಬಂದಿರುವುದಾಗಿ ನಂಬಿಸಿದ್ದರು. ಇದಕ್ಕೆ ₹ 35,000 ಶುಲ್ಕ ಪಾವತಿಸುವಂತೆ ಸೂಚಿಸಿದ್ದರು. ಇದನ್ನು ನಂಬಿದ ಮಹಿಳೆ ಹಣ ವರ್ಗಾವಣೆ ಮಾಡಿದ್ದರು. ಉಡುಗೊರೆಯ ಬಾಕ್ಸ್‌ನಲ್ಲಿ ದುಬಾರಿ ಬೆಲೆಯ ಕೈಗಡಿಯಾರ ಸೇರಿದಂತೆ ಅಮೂಲ್ಯ ವಸ್ತುಗಳಿವೆ. ಆದಾಯ ತೆರಿಗೆ, ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಲ್ಕ ಪಾವತಿಯಾಗಿಲ್ಲ ಎಂಬುದಾಗಿ ಮಹಿಳೆಯನ್ನು ಬೆದರಿಸಿದ್ದರು. ವಿವಿಧ ಕಾರಣಗಳನ್ನು ನೀಡಿ ಡಿ.31ರವರೆಗೆ ಮಹಿಳೆಯಿಂದ ಹಂತಹಂತವಾಗಿ ₹ 47.85 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *