Breaking News

ತನ್ನ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟ ಹಣ್ಣಿನ ರಾಜ


ಹುಬ್ಬಳ್ಳಿ : ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬೇಸಿಗೆ ಬಂದರೆ ಸಾಕು ಹಣ್ಣುಗಳ ರಾಜನೆಂದು ಕರೆಸಿಕೊಳ್ಳುವ ಮಾವಿನ ಹಣ್ಣುಗಳದೇ ಸಾಮ್ರಾಜ್ಯ. ಈ‌ ಬಾರಿ ಮಾವಿನ ಹಣ್ಣಿನ ಬೆಳೆ ಇಳುವರಿ ಕಡಿಮೆಯಾಗಿದೆ. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಸಾಮಾನ್ಯ ವರ್ಗದವರ ಕೈಗೆಟುಕದಂತಾಗಿದೆ.ಸ್ಥಳೀಯ ಮಾರುಕಟ್ಟೆಯಲ್ಲಿಯೂ ಬೆಲೆ ಏರಿಕೆ ಕಂಡಿದೆ. ಕಳೆದ ವರ್ಷ ಗುಣಮಟ್ಟದ ಮಾವುಗೆ ಕೆ.ಜಿ.ಗೆ ಸುಮಾರು 100 ರಿಂದ 150 ರೂ. ಇತ್ತು. ಆದ್ರೆ ಈ ಬಾರಿ 240 ದಿಂದ 400 ರೂ. ಬೆಲೆಗೆ ಏರಿಕೆ ಕಂಡಿದೆ.

ಲೋಕಲ್‌ನಲ್ಲಿ ಇಷಾಡಿ, ಆಪೂಸ್, ಕಲ್ಮಿ, ತೋತಾಪುರಿ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿದ್ದವು. ಆದರೆ ಈ ಬಾರಿ ಮಾವಿನ ಕೃಷಿಯ ಆಸಕ್ತಿ ಕಡಿಮೆಯಾಗಿ ಬೆಲೆ ಏರಿದೆ. ಬೆಲೆ ದುಬಾರಿಯಾದ್ದರಿಂದ ಗ್ರಾಹಕರು ಮಾವಿನ ಹಣ್ಣನ್ನು ಖರೀದಿಸದೆ ಕಡಿಮೆ ದರದಲ್ಲಿ ದೊರಕುವ ಇತರೆ ಹಣ್ಣುಗಳಿಗೆ ಮೊರೆ ಹೋಗುತ್ತಿದ್ದಾರೆ.

ಪ್ರತಿ ವರ್ಷ ಮಾರುಕಟ್ಟೆಗೆ ಸ್ಥಳೀಯವಾಗಿ ವಿವಿಧ ತಳಿಯ ಮಾವುಗಳು ಹುಬ್ಬಳ್ಳಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದವು. ಆದರೆ ಈ ವರ್ಷ ಅಂಕೋಲಾ, ಧಾರವಾಡ ಸ್ಥಳೀಯ ಹಣ್ಣುಗಳೇ ಜಾಸ್ತಿ ಇವೆ. ಬೆಳೆ ಕಡಿಮೆ ಆಗಿದ್ದರಿಂದ ಮಧ್ಯವರ್ತಿಗಳು ಗರಿಷ್ಠ ದರಕ್ಕೆ ಮಾರಾಟ ಮಾಡುತ್ತಾರೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *