ಕಲಬುರಗಿ ಕೇಂದ್ರ ಕಾರಾಗೃಹದಿಂದ ಮಂಗಳವಾರ ನಸುಕಿನ ವೇಳೆ ಮೂವರು ಸಜಾ ಕೈದಿಗಳು ಜೈಲಿನ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಈ ಘಟನೆ ಬೆಳಕಿಗೆ ಬಂದ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಪರಾರಿಯಾದವರು ಬೀದರ್ ಜಿಲ್ಲೆಯ ಮಸ್ತಾನ್, ಸಂತೋಷ ಹಾಗೂ ಸಾಗರ ಎಂದು ಗುರುತಿಸಲಾಗಿದ್ದು, ಮೂವರೂ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಅವರ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ. ಸೋಮವಾರವೇ ಪೊಲೀಸ್ ಅಧಿಕಾರಿಗಳು ಜೈಲಿನ ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದರೂ, ಮರುದಿನವೇ ಕೈದಿಗಳು ಪರಾರಿಯಾಗಿರುವುದು ಭದ್ರತಾ ಲೋಪದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

