ದಾವಣಗೆರೆ: ವಾಹನಗಳ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ₹ 4,25,000 ಮೊತ್ತದ 7 ದ್ವಿಚಕ್ರ ವಾಹನ ಹಾಗೂ ಒಂದು ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಅಪ್ಪು ನಾಗೇನಹಳ್ಳಿ ಅಲಿಯಾಸ್ ಅಬ್ಬಾಸ್ ಅಲಿ ಬಂಧಿತ ಆರೋಪಿ. ಕಳವು ಮಾಡಿದ್ದ ಟಾಟಾ ಏಸ್‌ನಲ್ಲಿ ತೆರಳುತ್ತಿದ್ದ ಆರೋಪಿಯು ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದ. ಆರೋಪಿ ವಿರುದ್ಧ ಹರಿಹರ ನಗರ ಠಾಣೆ, ಹರಪನಹಳ್ಳಿ ಠಾಣೆ, ರಾಣೆಬೆನ್ನೂರು ನಗರ ಠಾಣೆ, ತುಮಕೂರು ಠಾಣೆ, ಹೊನ್ನಾಳಿ ಠಾಣೆ ಹಾಗೂ ಚನ್ನಗಿರಿ ಠಾಣೆಗಳಲ್ಲಿ ಒಟ್ಟು 8 ಕಳವು ಪ್ರಕರಣಗಳು ದಾಖಲಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

