Breaking News

ಅಕ್ರಮ ಗೋಮಾಂಸ ಸಂಗ್ರಹ ಪತ್ತೆ; ಪೊಲೀಸರಿಂದ ವಶ

ಸಾಗರ: ಇಲ್ಲಿನ ನೆಹರು ನಗರದ ನವಾಯತ್ ಕಾಲೋನಿಯ ಮನೆಯೊಂದರಲ್ಲಿ ಸುಮಾರು 24 ಕೆಜಿ ಗೋಮಾಂಸ ಪತ್ತೆಯಾಗಿದೆ. ಪೇಟೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವೀಳ್ಯದೆಲೆ ಮಾರಾಟ ಮಾಡುವ ಎಲೆ ಫಾರೂಕ್ ಎಂಬುವವರ ಮನೆಯಲ್ಲಿ ದನದ ಮಾಂಸ ಸಿಕ್ಕಿದೆ.
ನೆಹರು ನಗರದ ಅವರ ಮನೆಯಲ್ಲಿ ಭದ್ರಾವತಿಯಿಂದ ಅಥವಾ ಶಿವಮೊಗ್ಗದ ತುಂಗಾ ನಗರದಿಂದ 80 ಕೆಜಿ ದನದ ಮಾಂಸ ತರಿಸಿ ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿಯನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಭದ್ರಾವತಿ ಮೂಲದ ವ್ಯಕ್ತಿಯಿಂದ ಈ ಮಾಂಸ ತರಿಸಿ ಆರೋಪಿ ಸಾಗರದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಆಧಾರದ ಮೇರೆಗೆ ಬೆಳಗ್ಗೆಯಿಂದ ಕಣ್ಣಿಟ್ಟಿದ್ದ ಪೊಲಿಸರು, ಸಂಜೆಯ ನಂತರ ಜನ ಬಂದು ಖರೀದಿಸುತ್ತಿದ್ದಾಗ ದಾಳಿ ನಡೆಸಿದ್ದಾರೆ.

Share News

About BigTv News

Check Also

ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಜಗಳ; ಚಿಕ್ಕಪ್ಪನಿಗೆ ಚಾಕು ಇರಿತ!

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ …

Leave a Reply

Your email address will not be published. Required fields are marked *