ಅನೈತಿಕ
ಸಂಬಂಧ ಹಿನ್ನೆಲೆಯಲ್ಲಿ ಮಗುವನ್ನು ಕೊಲೆ ಮಾಡಿ ಮೃತ
ದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದ ಮಗುವಿನ ಹೆತ್ತ ತಾಯಿ ಹಾಗೂ ಪ್ರಿಯಕರನನ್ನು
ಬಂಧಿಸುವಲ್ಲಿ ಗೋಕುಲ್ ರೋಡ್ ಠಾಣೆ ಪೊಲೀಸರು
ಯಶಸ್ವಿಯಾಗಿದ್ದಾರೆ. ದಾದಾಪೀರ್ ಹಾಗೂ ಪೂಜಾ ಬಂಧಿತ ಆರೋಪಿಗಳಾಗಿದ್ದಾರೆ. ಅನೈತಿಕ ಸಂಬಂಧಕ್ಕೆ ಮಗುವನ್ನು ಕೊಂದು ನಂತರ ಮಗುವಿಗೆ ಜ್ವರ ಬಂಧಿದೆ ಎಂದು ಕಿಮ್ಸ್ ಆಸ್ಪತ್ರಗೆ
ಕರೆದುಕೊಂಡು ಬಂದಿದ್ದರು. ಆದ್ರೆ ವೈಧ್ಯರು ಚಿಕಿತ್ಸೆ ಕೊಡಲು ಮುಂದಾದಾಗ ಮಗು ಸತ್ತು ಹೋಗಿರುವುದು
ವೈದ್ಯರಿಗೆ ತಿಳಿದು ಬಂದಿದೆ. ನಂತರ ಪ್ರೀಯಕರರು ಮಗು ಸತ್ತ ವಿಷಯ ತಿಳಿಯುದ್ದಂತೆ ಮಗುವಿನ ಡೆಡ್ ಬಾಡಿ ಬಿಟ್ಟು ಎಸ್ಕೇಪ್ ಆಗಿದ್ದರು.
ಅಷ್ಟಕ್ಕೂ
ಮಗುವಿನ ಕೊಲೆಗೆ ಕಾರಣ ನೋಡುವುದಾದ್ರೇ ಕಳೆದ ಎಂಟು
ವರ್ಷಗಳ ಹಿಂದೆ ಬೆಳಗಾವಿಯ ರಾಜು ತಾಳೂರಕರ್ ಗೆ ಪೂಜಾಳನ್ನು ಕೊಟ್ಟು ಮದುವೆ ಮಾಡಲಾಗಿತ್ತು.
ಆದ್ರೆ ದಾದಾಪೀರ್ ಜೊತೆ ಅನೈತಿಕ ಸಂಬಂಧ ಹೊಂದಿದ್ದು,. ಕಳೆದ ಒಂದು ತಿಂಗಳ ಹಿಂದೆ ಗಂಡನ ಮನೆ ಬಿಟ್ಟು ಪ್ರಿಯಕರನ ಜೊತೆ
ವಾಸವಿದ್ದಳು. ಮೃತ ಮಗು, ರಾಜು ತಾಳೂಕರ್ ಗೆ ಹುಟ್ಟಿದೆ ಎಂಬ ಕಾರಣಕ್ಕೆ ಆಗಾಗ ಈ ಮಗು ಇರಬಾರದು ಎಂದು ದಾದಾಪೀರ ಮಗುವಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆ. 20 ರಂದು ದೊಣ್ಣೆಯಿಂದ ಮಗುವಿನ ತಲೆಗೆ ಹೊಡೆದು ಕೊಂದು ಆನಂತರ
ಆಸ್ಪತ್ರೆಗೆ ಸೇರಿಸುವ ನಾಟಕವಾಡಿ ಕೊನೆಗೆ ಕಾಲ್ಕಿತ್ತಿದ್ದರು. ಕೊನೆಗೂ ಒಂದು ವಾರದ ನಂತರ
ದಾದಾಪೀರ್ ಹಾಗೂ ಪೂಜಾಳನ್ನ ನೂತನ ಆಯುಕ್ತರಾದ ಆರ್ ದೀಲೀಪ್ ಅವರ ನೇತೃತ್ವದಲ್ಲಿ ಗೋಕುಲ್ ರೋಡ್
ಪೊಲೀಸರು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





