ರಾಜಸ್ಥಾನ: ಜೋಧ್‌ಪುರದ ಭುಂಗ್ರಾ ಗ್ರಾಮದಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮದುವೆಗೆ ಬಂದಿದ್ದ 60 ಜನ ಅತಿಥಿಗಳು ಗಾಯಗೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದ ನಂತರ ನೀರಿನ ಟ್ಯಾಂಕರ್ ಗಳೊಂದಿಗೆ ಅಗ್ನಿಶಾಮಕ ದಳದ ತಂಡವನ್ನು ಕರೆಸಲಾಗಿದ್ದು, ಬೆಂಕಿ ನಂದಿಸಲಾಗಿದೆ.ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಪ್ರಕಾರ, ಗುರುವಾರ ಭುಂಗ್ರಾದಿಂದ ವರನ ಮೆರವಣಿಗೆ ಪ್ರಾರಂಭವಾಗುವ ಮೊದಲು ಈ ಘಟನೆ ನಡೆದಿದೆ. ಭುಂಗ್ರಾ ಗ್ರಾಮದಲ್ಲಿ ಮದುವೆಯ ಸಂದರ್ಭದಲ್ಲಿ ಮನೆಗೆ ಬೆಂಕಿ ತಗುಲಿ ಸುಮಾರು 60 ಜನರು ಗಾಯಗೊಂಡಿದ್ದಾರೆ, ಇದು ತುಂಬಾ ಗಂಭೀರವಾದ ಅವಘಡವಾಗಿದೆ. ಗಾಯಗೊಂಡ 60 ರಲ್ಲಿ 42 ಜನರನ್ನು MGH ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಜೋಧ್ ಪುರದ ಭುಂಗ್ರಾ ಗ್ರಾಮದ ಮದುವೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಾಗ ಉಂಟಾದ ಬೆಂಕಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

