Breaking News

ಸಿಂಧನೂರು | ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯ ಮೃತದೇಹ ಪತ್ತೆ

ಸರಕಾರಿ ಸೇವೆಯಲ್ಲಿದ್ದುಕೊಂಡೇ ಮಠ ಸ್ಥಾಪಿಸಿ, ಸ್ವಾಮೀಜಿಯಾಗಿದ್ದ ಮುಖ್ಯಗುರುವೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನ ಬಸ್ಸಾಪುರ (ಇಜೆ) ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಮುಳ್ಳೂರು ಇಜೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ದೇವೆಂದ್ರಪ್ಪ (58) ಮೃತರು. ಸರಕಾರಿ ಶಿಕ್ಷಕನಾಗಿ ಸೇವೆಯಲ್ಲಿದ್ದ ದೇವೆಂದ್ರಪ್ಪ ಅವರು, ಕಳೆದ ಅನೇಕ ವರ್ಷಗಳಿಂದ ವೈರಾಗ್ಯ ಜೀವನದತ್ತ ಮುಖ ಮಾಡಿದ್ದರು ಎನ್ನಲಾಗಿದೆ. ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದ ಅವರು ಕಳೆದ ಎರಡು ದಶಕಗಳಿಂದ ಸಿಂಧನೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ, ಸರಕಾರಿ ನೌಕರಿ ಜೊತೆಗೆ ಬಸ್ಸಾಪುರ ಗ್ರಾಮದಲ್ಲಿ ಮಠ ಶಿವಾನಂದ ಜಗದ್ಗುರು ನಾಮದಡಿ ಮಠವನ್ನು ಸ್ಥಾಪಿಸಿ, ತಮ್ಮದೇ ಆದ ಭಕ್ತಸಮೂಹ ಸಂಪಾದಿಸಿದ್ದರು. ಶಾಲಾ ಅವಧಿ ನಂತರ ಮಠದಲ್ಲಿ ಪುರಾಣ, ಪ್ರವಚನ ನಡೆಸುತ್ತಿದ್ದ ತಮ್ಮ ಮಠದಲ್ಲೇ ಅವರ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತುರ್ವಿಹಾಳ ಪಿಎಸ್‌ಐ ಸುಜಾತ ಭೇಟಿ ನೀಡಿ ಘಟನೆ ಬಗ್ಗೆ ಕುಟುಂಬಸ್ಥರು ಹಾಗೂ ಭಕ್ತರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ರಮೇಶ ಎನ್ನುವವರು ದೂರು ನೀಡಿದ್ದು, ತುರ್ವಿಹಾಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share News

About BigTv News

Check Also

ಹುಬ್ಬಳ್ಳಿ ಸಿದ್ಧಾರೂಢ ಮಠದ ಬಳಿ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ ದಾಖಲು

ಹುಬ್ಬಳ್ಳಿ: ಸಿದ್ಧಾರೂಢ ಮಠದ ಪುಷ್ಕರಣಿ ಬಳಿಯ ಶೌಚಾಲಯದ ಹಿಂಭಾಗ 50 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಹಳೇಹುಬ್ಬಳ್ಳಿ …

Leave a Reply

Your email address will not be published. Required fields are marked *