Breaking News

ಶಿವಮೊಗ್ಗದಲ್ಲಿ ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಸಾವು : ಆಸ್ಪತ್ರೆ ವಿರುದ್ಧ ಪೋಷಕರಿಂದ ಪ್ರತಿಭಟನೆ

ಶಿವಮೊಗ್ಗದಲ್ಲಿ ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಸಾವನ್ನಪ್ಪಿರುವ ಘಟನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. 2ನೇ ಬಾರಿಗೆ ಶಸ್ತ್ರ ಚಿಕಿತ್ಸೆಗೆ ನೂರ್ ಅಪ್ಸ(26) ಒಳಗಾಗಿದ್ದು, ಇದೀಗ ಇಂದು ಸಾವನ್ನಪ್ಪಿದ್ದರೆ. ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷವೆ ಕಾರಣ ಎಂದು ಆರೋಪಿಸಲಾಗುತ್ತಿದೆ.ವೈದ್ಯರ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್ 21 ರಂದು ನೂರ್ ಗಂಡು ಮಗುವಿಗೆ ಜನ್ಮ ನೀದ್ದರು. ಸಿಸೆರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಪರೇಷನ್ ಬಳಿಕ ನೂರ್ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. 1 ವಾರದಿಂದ ಬಾಣಂತಿ ಮಲ ವಿಸರ್ಜನೆ ಸಹ ಮಾಡಿರಲಿಲ್ಲ ನಂತರ ವೈದ್ಯರು ಮತ್ತೊಂದು ಆಪರೇಷನ್ ಮಾಡಿದರು. ಚಿಕಿತ್ಸೆ ಫಲಿಸದೇ ನೂರ್ ಸಾವನ್ನಪ್ಪಿದ್ದರೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಅಗ್ರಹಿಸುತ್ತಿದ್ದಾರೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *