Breaking News

*ಮಹಾರಾಷ್ಟ್ರ, ಇಂದೋರ್ ನಿಂದ ಗಾಂಜಾ ತಂದು ಮಾರಾಟ: ಆರೋಪಿ ಅರೆಸ್ಟ್*

ಬೆಳಗಾವಿ: ಮಹಾರಾಷ್ಟ್ರ ಹಾಗೂ ಇಂದೋರ್ ನಿಂದ ಗಾಂಜಾ ತಂದು ಬೆಳಗಾವಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಮಾನಸ ಮನೋಹರ ಕದಮ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ರಿತಿಕ ಪಾಟೀಲ ಎಂಬಾತ ಪರಾರಿಯಾಗಿದ್ದಾನೆ. ಆರೋಪಿಗಳು ಮಹಾರಾಷ್ಟ್ರ-ಇಂದೋರ್ ಆರ್ಡರ್ ನಿಂದ ಸುನೀಲ ಕಲಗಾಟ ಎಂಬಾತನಿಂದ ಗಾಂಜಾ ತಂದು ಬೆಳಗಾವಿ ಗ್ರಾಮೀಣ ಪ್ರದೇಶದ ಜೈತುನ ಮಾಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುವಾಗ ಸಿಸಿಬಿ ಪೊಲೀಸರು ಆರೋಪಿತನ್ನು ಬಂಧಿಸಿದ್ದಾರೆ. ಬಂಧಿತನಿಂದ 55,000 ರೂ. ಮೌಲ್ಯದ 1 ಕೆ.ಜಿ. 100ಗ್ರಾಂ ಗಾಂಜಾ, 600 ರೂ ಮೌಲ್ಯದ ಡಿಜಿಟಲ್ ತೂಕದ ಯಂತ್ರ, 8,000 ರೂ. ಮೋಬೈಲ್, ಹೀಗೆ ಒಟ್ಟು 63,600 ರೂ ಮೌಲ್ಯದ ವಸ್ತುಗಳನ್ನು ಜಪ್ತಪಡಿಸಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ, ಪರಾರಿಯಾದ ಆರೋಪಿ ಪತ್ತೆ ಹಾಗೂ ಪ್ರಕರಣದ ತನಿಖೆ ಮುಂದುವರೆಸಲಾಗಿದೆ. ಮೇಲಿನ ಪ್ರಕರಣದಲ್ಲಿ ದಾಳಿ ಕೈಗೊಂಡ ಸಿಸಿಬಿ ವಿಭಾಗದ ಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್‌ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿದ್ದಾರೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *