ಹುಬ್ಬಳ್ಳಿ: ದರೋಡೆಕೋರನ ಮನೆ ದರೋಡೆಗೆ ಯತ್ನಿಸಿದ ಹಿನ್ನಲೆ ಅವರ ಕಾಲಿಗೆ ಗೋಕುಲ ಠಾಣೆಯ ಪೊಲೀಸರು ಗುಂಡೇಟು ನೀಡಿ ಬಂಧಿಸಿದ ಘಟನೆ ಇಂದು ಬೆಳಗಿನ ಜಾವ ಗೋಕುಲದಲ್ಲಿ ನಡೆದಿದೆ.
ಗೋಕುಲ ಗ್ರಾಮದ ಮನೆಯೊಂದರಲ್ಲಿ ದರೊಡೆಕೋರ ಮಾಡಲು ಸೀತಾರಾಮ ಕಾಳೆ ಮುಂದಾಗಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಆರೋಪಿ ಸೀತಾರಾಮ ಕಾಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾಗಿದ್ದ.ಕೂಡಲೇ ಗೋಕುಲ ಠಾಣೆಯ ಪಿಎಸ್ಐ ಸಚಿನ್ ದಾಸರೆಡ್ಡಿ ಆರೋಪಿ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯವಾಗಿದ್ದು ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೋಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

