Breaking News

ಚೆನ್ನೈ- ಮಂಗಳೂರು ಸೆಂಟ್ರಲ್ ರೈಲಿನಲ್ಲಿ ಗಾಂಜಾ ಪತ್ತೆ

ಮಂಗಳೂರು: ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ರೈಲಿನಲ್ಲಿ ಸುಮಾರು 5,06,450 ರೂ. ಮೌಲ್ಯದ 10 ಕೆ.ಜಿ.129 ಗ್ರಾಂ. ಒಣ ಗಾಂಜಾ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ 11.56ರ ಸುಮಾರಿಗೆ ಇಲ್ಲಿನ ನಿಲ್ದಾಣದ ಒಂದನೇ ಫ್ಲಾಟ್ ಫಾರಂಗೆ ಆಗಮಿಸಿದ ರೈಲಿನ ಜನರಲ್ ಬೋಗಿಯಲ್ಲಿ ವಾರಸುದಾರರು ಇಲ್ಲದ ಬಾಕ್ಸ್ ನಲ್ಲಿ ಗಾಂಜಾ ಪತ್ತೆಯಾಯಿತು. ಆರ್ ಪಿಎಫ್ ನ ಇನ್ ಸ್ಪೆಕ್ಟರ್ ಮನೋಜ್ ಕುಮಾರ್ ಅವರು ತಂಡದೊಂದಿಗೆ ಪರಿಶೀಲನೆ ನಡೆಸಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಅಬಕಾರಿ ದಳಕ್ಕೆ ಹಸ್ತಾಂತರಿಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *