Breaking News

ಪೆಟ್ರೋಲ್ ಸುರಿದು ಮಹಿಳೆಯ ಕೊಲೆ ಯತ್ನ : ಚಿಕಿತ್ಸೆ ಫಲಿಸದೆ ವೃದ್ಧೆ ಸಾವು

ಚಿಕ್ಕಬಳ್ಳಾಪುರ: ಪೆಟ್ರೋಲ್ ಸುರಿದು ಮಹಿಳೆ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ಚಿಂತಾಮಣಿಯ ಕೆಜಿಎನ್ ಬಡಾವಣೆಯ ಲಕ್ಷ್ಮಿದೇವಮ್ಮ(60) ಮೃತ ಮಹಿಳೆ. ಕಿಡಿಗೇಡಿಗಳು ಮಹಿಳೆ ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಕೊಲೆ ಯತ್ನಿಸಿದ್ದರು. ಈ ಹಿನ್ನೆಲೆ ಮಹಿಳೆ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆದರೆ ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಮೃತ ಮಹಿಳೆಯ ಮಗ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮಗನಿಂದಲೇ ಕೃತ್ಯ ನಡೆದಿರುವ ಶಂಕೆ ಕೂಡ ಇದೀಗ ವ್ಯಕ್ತವಾಗಿದೆ.ಈ ಘಟನಾ ಸಂಬಂಧ ಚಿಂತಾಮಣಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *