Breaking News

ಸಾಲ ಕೊಡಿಸುವುದಾಗಿ ₹3.50 ಲಕ್ಷ ವಂಚನೆ

ಕಲಬುರಗಿ: ಮೀನುಗಾರಿಕೆ ಇಲಾಖೆಯಿಂದ ಎಸ್ಸಿ, ಎಸ್ಟಿ ಯೋಜನೆ ಅಡಿ ಸಬ್ಸಿಡಿ ದರದಲ್ಲಿ ಸಾಲ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ₹3.50 ಲಕ್ಷ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.ಮೂಲತಃ ಕಾಳಗಿ ತಾಲ್ಲೂಕಿನ ಕೊಡ್ಲಿ ಗ್ರಾಮದ ರಾಮನಗರ ತಾಂಡಾ ನಿವಾಸಿ, ಹಾಲಿ ಕಲಬುರಗಿಯ ಶಹಾಬಜಾರ್‌ನಲ್ಲಿ ನೆಲೆಸಿರುವ ವಿಠಲ ಚವ್ಹಾಣ ವಂಚನೆಗೆ ಒಳಗಾದವರು. ‘ಸಂಬಂಧಿಕರ ಮೂಲಕ ಫೋನ್‌ನಲ್ಲಿ ಪರಿಚಿತನಾದ ಗುಂಡಪ್ಪ ಪೂಜಾರಿ, ಮೀನುಗಾರಿಕೆ ಇಲಾಖೆಯಿಂದ ಸಬ್ಸಿಡಿ ಸಾಲ ಕೊಡಿಸುತ್ತೇನೆ. ಅದಕ್ಕೆ ಶುಲ್ಕ ಕಟ್ಟಬೇಕು ಎಂದು 2023ರ ಮಾರ್ಚ್ 14ರಿಂದ 2023ರ ಮೇ 9ರ ತನಕ ನಾಲ್ಕು ಹಂತಗಳಲ್ಲಿ ₹3.50 ಲಕ್ಷ ಪಡೆದಿದ್ದಾನೆ. ಸಾಲವನ್ನೂ ಕೊಡಿಸದೇ ಪಡೆದ ಹಣವನ್ನೂ ಮರಳಿಸದೇ ವಂಚಿಸಿದ್ದಾನೆ’ ಎಂದು ವಿಠಲ ದೂರಿನಲ್ಲಿ ತಿಳಿಸಿದ್ದಾರೆ. ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *