ಮಡಿಕೇರಿ: ಕೊಡಗು ಜಿಲ್ಲೆಯ ನಾಪೊಕ್ಲು ಎಮ್ಮೆಮಾಡು ಗ್ರಾಮದಲ್ಲಿ ತುಳುನಾಡಿನ ದೈವ ಹೋಲುವ ರೀತಿಯಲ್ಲಿ ಮದುಮಗನಿಗೆ ದೈವದ ವೇಷ ಹಾಕಿ ಅತಿರೇಕದ ವರ್ತನೆ ತೋರಿಸಲಾಗಿದ್ದು, ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮದುಮಗನಿಗೆ ದೈವದ ವೇಷ ಹಾಕಿದ ಘಟನೆಯ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ದೈವಕ್ಕೆ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಮದುಮಗನಿಗೆ ದೈವದ ವೇಷ ತೊಡಿಸಿ ಹೀಯಾಳಿಸಿ ಮೆರವಣಿಗೆ ಮಾಡಿಸಲಾಗಿದೆ. ಹಿಂದೂ ಪರ ಸಂಘಟನೆಗಳ ಪ್ರಮುಖರು ಈ ಕುರಿತಾಗಿ ದೂರು ದಾಖಲಿಸಿದ್ದಾರೆ. ಅಬ್ದುಲ್ ರಶೀದ್, ಹನೀಫ್, ಲತೀಪ್, ಮೊಹಮ್ಮದ್ ಫೈಸಲ್, ಬಶೀರ್, ಶಕೀರ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

