ಸವದತ್ತಿ: ತಾಲೂಕಿನ ಯಲ್ಲಮ್ಮ ದೇವಸ್ಥಾನದಲ್ಲಿ ಸುಲಿಗೆ ಮಾಡಲಾದ ಚಿನ್ನಾಭರಣ ಹಾಗೂ ಠಾಣೆಯಲ್ಲಿ ದಾಖಲಿದ್ದ 4 ಮನೆ ಕಳವು ಪ್ರಕರಣಗಳನ್ನು ಬೇಧಿಸಿ, ಒಬ್ಬ ಆರೋಪಿ ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಸವದತ್ತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಯಲ್ಲಮ್ಮನ ಜಾತ್ರೆಗೆ ಜ.4 ರಂದು ಬಂದಿದ್ದ ಬೈಲಹೊಂಗಲ ತಾಲ್ಲೂಕು ಬೆಳವಡಿ ಗ್ರಾಮದ ರೇಣುಕಾ ನಂದಿ ಅವರ ಹತ್ತಿರವಿದ್ದ ₹80 ಸಾವಿರ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಬೆದರಿಸಿ ಕಿತ್ತುಕೊಂಡು ಪರಾರಿಯಾಗಿದ್ದನು.ಸವದತ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾರ್ಚ್ 29 ರಂದು ಕಳವು ಮಾಡಿದ ಆರೋಪಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಪಕ್ಕೀರೇಶ (ದರ್ಶನ) ಗಂಗಪ್ಪ ಕಂಬಳಿ ಈತನನ್ನು ಬಂಧಿಸಿ ₹6.90 ಲಕ್ಷ ಮೌಲ್ಯದ 46 ಗ್ರಾಂ ಚಿನ್ನಾಭರಣ, ₹1.55 ಲಕ್ಷ ಮೌಲ್ಯದ 675 ಗ್ರಾಂ ಬೆಳ್ಳಿ ಆಭರಣ, ₹50 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ ಆಯುಧ ಸೇರಿ ಒಟ್ಟು ₹8.95 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಿಐ ಸುರೇಶ ಬೆಂಡೆಗುಂಬಳ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

