Breaking News

ಮಂಚಿಕಟ್ಟೆ: ಅಕ್ರಮ ಮರಳು ಸಾಗಾಟ ವಶ

ಬಂಟ್ವಾಳ: ಸಜೀಪಮೂಡ ಗ್ರಾಮದ ಕಾರಾಜೆ ಬಳಿಯ ಹಳ್ಳದಿಂದ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ ಪಿಕ್ ಅಪ್ ವಾಹನವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಮಂಚಿಕಟ್ಟೆಯಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಸಜೀಪಮೂಡ ನಿವಾಸಿ ಪಿಕ್ ಅಪ್ ವಾಹನ ಚಾಲಕ ಅಬ್ದುಲ್ ರಝಾಕ್ ಪ್ರಕರಣದ ಆರೋಪಿಯಾಗಿದ್ದು, ಗ್ರಾಮಾಂತರ ಠಾಣಾ ಪಿಎಸ್‌ಐ ರನ್ನಗೌಡ ಪಾಟೀಲ್ ಅವರಿಗೆ ಬಂದ ಖಚಿತ ಮಾಹಿತಿಯಂತೆ ಮಂಚಿಕಟ್ಟೆಗೆ ತೆರಳಿ ಪಿಕ್ ಅಪ್ ವಾಹನವನ್ನು ತಡೆದು ಚಾಲಕನನ್ನು ವಿಚಾರಿಸಿದಾಗ ಪರವಾನಿಗೆ ಪಡೆಯದೆ ಮರಳು ಸಾಗಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ.ಪೊಲೀಸರು ಮರಳು ತುಂಬಿದ ಪಿಕ್ ಅಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *