ಕತ್ತಿ, ಖಡ್ಗ ಝಳಪಿಸುತ್ತಾ ದೊಡ್ಡ ಹೀರೋ ರೀತಿಯಲ್ಲಿ ಫೋಸು ಕೊಡುತ್ತಾ ತನ್ನ ಪೌರುಷವನ್ನು ಮೆರೆಯುವ ವಿಡಿಯೋ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದ. ಇದನ್ನು ಗಮನಿಸಿದ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸಿಬ್ಬಂದಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು. ಗುರುವಾರ ಮುಶ್ರಫ್ ಖಾನ್ ನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಪೊಲೀಸರುನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಈ ರೀತಿ ಯುವಕರು ಶೋಕಿ ಮಾಡಲು ಹೋಗಿ ಫಜೀತಿಯಲ್ಲಿ ಸಿಲುಕಬಾರದು ಎಂದು ಪೊಲೀಸ್ ಅಧಿಕಾರಿ ಭೀಮಾಶಂಕರ್ ಗುಳೇದ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

