Breaking News

ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ: ಅತ್ಯಾಚಾರ ಬಳಿಕ ₹70 ಸಾವಿರ ವಸೂಲಿ ಮಾಡಿದ್ದ ಸಮೀರ್

ನಗರದಲ್ಲಿ ದಾಖಲಾಗಿರುವ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ಟ್ರೈನರ್‌ ಸಮೀರ್ ವಿರುದ್ಧ ಗಂಭೀರ ಆರೋಪಗಳು ಹೊರಬಂದಿವೆ. ಪೊಲೀಸರ ತನಿಖೆಯಲ್ಲಿ, ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಬೆದರಿಕೆ ಹಾಕಿ ₹70,000ಕ್ಕೂ ಅಧಿಕ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.ವಿವಿಧ ಹಂತಗಳಲ್ಲಿ ₹5,000, ₹20,000, ₹25,000 ಸೇರಿದಂತೆ ಹಲವಾರು ಬಾರಿ ಹಣ ಪಡೆದಿದ್ದಾನೆ ಎನ್ನಲಾಗಿದೆ. ಈ ವ್ಯವಹಾರಗಳಿಗೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳು ಕೂಡ ಪತ್ತೆಯಾಗಿವೆ. ಇದಕ್ಕೂ ಮೊದಲು ಆರೋಪಿಯ ಮೊಬೈಲ್‌ ಪರಿಶೀಲನೆ ವೇಳೆ ಹಲವು ವಿಡಿಯೋಗಳು ಹಾಗೂ ಯುವತಿಯರೊಂದಿಗೆ ನಡೆದ ವಾಟ್ಸಪ್ ಚಾಟ್‌ಗಳು ಪತ್ತೆಯಾಗಿದ್ದವು. ಸಂತ್ರಸ್ತೆಗೆ ಗರ್ಭಪಾತದ ಮಾತ್ರೆ ಸೇವಿಸಲು ಒತ್ತಾಯ ಮಾಡುತ್ತಿದ್ದ ವಿಡಿಯೋಗಳೂ ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿ ಬಾರಿ ಲೈಂಗಿಕ ದೌರ್ಜನ್ಯ ಬಳಿಕ ಗರ್ಭಪಾತ ಮಾತ್ರೆ ನೀಡುತ್ತಿದ್ದ ಆರೋಪವಿದ್ದು, ನಿರಾಕರಿಸಿದರೆ ಒತ್ತಡ ಹೇರುತ್ತಿದ್ದನೆಂಬ ಮಾಹಿತಿ ಹೊರಬಂದಿದೆ. ಮಾತ್ರೆ ಸೇವಿಸುವ ವೇಳೆ ವಿಡಿಯೋ ಮಾಡಿ ಕಳುಹಿಸಲು ಕೂಡ ಸೂಚಿಸಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ. 8ರಿಂದ 10 ಬಾರಿ ಈ ರೀತಿಯ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಆರೋಪಿ ಸಮೀರ್ ಕೂಡ ಅಪಹರಣ ಪ್ರಕರಣ ದಾಖಲಿಸಿರುವುದು ಗಮನಾರ್ಹವಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *