Breaking News

ವಿದ್ಯಾಕಾಶಿ ಧಾರವಾಡದ ನಗರ ಬಸ್ ನಿಲ್ದಾಣ (CBT) ವ್ಯಾಪ್ತಿಯಲ್ಲಿ ಚಿಕ್ಕದಿರುವ ನಿಲ್ದಾಣವನ್ನು ನವೀಕರಣ ಕಾರ್ಯ…..

ಹುಬ್ಬಳ್ಳಿ: ಕರ್ನಾಟಕದ ವಿದ್ಯಾಕಾಶಿ ಧಾರವಾಡವು ಬೆಳೆಯುತ್ತಿರುವ ನಗರ-ಜಿಲ್ಲೆಗಳಲ್ಲಿ ಒಂದಾಗಿದೆ. ಇಲ್ಲಿ ಸಹ ಜನದಟ್ಟಣೆ ಹೆಚ್ಚಾಗಿದ್ದು, ಅಸ್ತಿತ್ವದಲ್ಲಿದ್ದ ನಗರ ಬಸ್ ನಿಲ್ದಾಣ (CBT) ವ್ಯಾಪ್ತಿಯಲ್ಲಿ ಚಿಕ್ಕದಿರುವ ನಿಲ್ದಾಣವನ್ನು ನವೀಕರಣ ಕಾರ್ಯ ಇಂದು ಸೋಮವಾರದಿಂದ ಆರಂಭವಾಗಿದೆ. ಧಾರವಾಡದ ನಗರ ಸಾರಿಗೆ ಬಸ್ ನಿಲ್ದಾಣವು ನೂತನ ಸಾರಿಗೆ ಬಸ್ ನಿಲ್ದಾಣವಾಗಿ ಕಂಗೊಳಿಸಲಿದೆ. ಈ ಸಂಬಂಧ ಯೋಜನೆ ಆರಂಭಕ್ಕೆ ಇಂದು ಸೋಮವಾರ ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಹ ಸಾಥ್ ನೀಡಿದರು. ಧಾರವಾಡ ಸಿಬಿಟಿ ಬಸ್ ನಿಲ್ದಾಣವು ಒಟ್ಟು 13 ಕೋಟಿ ರೂಪಾಯಿ ವೆಚ್ಚದಲ್ಲಿ ಧಾರವಾಡದ ಸಿಬಿಟಿ ನವೀಕರಣಗೊಳ್ಳಲಿದ್ದು, ಭೂಮಿಪೂಜೆ ನೆರವೇರಿಸಲಾಗಿದೆ. ಸಿವಿಲ್ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುವ ನಿರೀಕ್ಷೆ ಇದೆ.

Share News

About BigTv News

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *