ಕಾಂತಾರ ಸಿನಿಮಾ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ತೀವ್ರ ಆಘಾತವಾಗಿದ್ದು, ಕಾಂತಾರ ಚಿತ್ರದ ಪ್ರೀಕ್ವೆಲ್ ಕಾಂತಾರ-2 ಚಿತ್ರೀಕರಣದ ವೇಳೆ ಘೋರ ದುರಂತ ಇಂದು ಸಂಭವಿಸಿದೆ.ಶೂಟಿಂಗ್ ಸೆಟ್ನಲ್ಲಿದ್ದ ಓರ್ವ ಜೂನಿಯರ್ ಕಲಾವಿದ ಸಾವನ್ನಪ್ಪಿದ್ದಾರೆ.ಕೇರಳ ಮೂಲದ ಕಪಿಲ್ ಎಂಬ ಜೂನಿಯರ್ ಆರ್ಟಿಸ್ಟ್ ಬೈಂದೂರಿನ ಕೊಲ್ಲೂರಿನಲ್ಲಿ, ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಈ ಹಿಂದೊಮ್ಮೆ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಕರೆ ತರಲಾಗುತ್ತಿದ್ದ ಡ್ಯಾನ್ಸರ್ಸ್ ಗಳಿದ್ದ ವಾಹನವು ಅಪಘಾತಕ್ಕೀಡಾಗಿತ್ತು. ಸಿನಿಮಾ ತಂಡಕ್ಕೆ ಒಂದಿಲ್ಲ ಒಂದು ಸಂಕಷ್ಟ ಎದುರಾಗುತ್ತಿರುವುದು ಇಡೀ ಚಿತ್ರ ತಂಡದ ಕಲಾವಿದರ ಪರಿಸ್ಥಿತಿ ಆಘಾತಕ್ಕೆ ದೂಡಿದಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

