Breaking News

ಹಿಂದೂ ಮಹಿಳೆತರ ಮೇಲೆ ಸಾಮೂಹಿಕ ಅತ್ಯಾಚಾರ


ಬಹಾವಲಪುರ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ ರಾಜ್ಯದಲ್ಲಿನ ಬಹಾವಲಪುರದಲ್ಲಿ ಕೂಲಿ ಮಾಡುವ ಗಂಗಾರಾಮ್ ಇವರ ಪತ್ನಿ ಇಲ್ಲಿಯ ಮುಸಲ್ಮಾನ ಜಮೀನ್ದಾರ ಮಹಮ್ಮದ್ ಅಕ್ರಂ ಇವನ ಹತ್ತಿರ ಕೆಲಸ ಕೇಳುವುದಕ್ಕೆ ಹೋಗಿದ್ದಳು.

ಅವನು ಆಕೆಗೆ ಬೆದರಿಸಿ ಹಿಂತಿರುಗಿ ಕಳುಹಿಸಿದ್ದನು. ನಂತರ ಅಕ್ರಂ ಶಸ್ತ್ರ ತೆಗೆದುಕೊಂಡು ಆಕೆಯ ಮನೆಗೆ ಹೋಗಿ ಆಕೆಯ ಅಪಹರಣ ಮಾಡಿದನು. ಆಕೆಯ ಮೇಲೆ ೬ ಜನರು ಸಾಮೂಹಿಕ ಅತ್ಯಾಚಾರ ಮಾಡಿದರು. ಅದರ ನಂತರ ಆಕೆಯನ್ನು ಥಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ ನಂತರ ಪೊಲೀಸರು ೩ ಜನರನ್ನು ಬಂಧಿಸಿದ್ದಾರೆ.

ಈ ಮಹಿಳೆಗೆ ಪೊಲೀಸರಿಂದ ಆಸ್ಪತ್ರೆಗೆ ಕರೆದು ಕೊಂಡುಹೋದ ನಂತರ ಅಲ್ಲಿಯ ವೈದ್ಯರು ಆಕೆಗೆ ಚಿಕಿತ್ಸೆ ನೀಡಲು ಮತ್ತು ವೈದ್ಯಕೀಯ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದಾರೆ. ಈ ಘಟನೆಯ ಬಗ್ಗೆ ಸ್ಥಳೀಯ ಹಿಂದೂಗಳು ರಸ್ತೆಗಿಳಿದು ಆಂದೋಲನ ನಡೆಸುತ್ತಿದ್ದಾರೆ. ಆರೋಪಿ ಮತ್ತು ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *