Breaking News

ಕೊಲೆ ಪ್ರಕರಣ: 18 ಆರೋಪಿಗಳ ಸೆರೆ

ಮದ್ದೂರು: ನಗರದ ಹೊಳೆಆಂಜನೇಯಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಕಳೆದ ಭಾನುವಾರ ರಾತ್ರಿ ನಡೆದಿದ್ದ ಯುವಕನ ಕೊಲೆಗೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳು ಸೇರಿದಂತೆ ಅದೇ ಘಟನೆಯಲ್ಲಿ ಕೊಲೆಗೆ ಯತ್ನ ನಡೆಸಿದ್ದ 9 ಮಂದಿ ಯುವಕರನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಭಾನುವಾರ ರಾತ್ರಿ ಸಿಗರೇಟ್ ವಿಷಯಕ್ಕೆ ಎರಡು ಯುವಕರ ಗುಂಪುಗಳ ನಡುವೆ ನಡೆದಿದ್ದ ಮಾರಾಮಾರಿಯಲ್ಲಿ ನಗರದ ಸೋಮೇಗೌಡರ ಬೀದಿ ನಿವಾಸಿ ಯಶವಂತ್ ಆಲಿಯಾಸ್ ಕಜ್ಜಿ ಎಂಬ ಯುವಕ ಕೊಲೆಯಾಗಿದ್ದ. ಅದೇ ಘಟನೆಯಲ್ಲಿ ತಾಲ್ಲೂಕಿನ ಗೊರವನಹಳ್ಳಿ ಯುವಕರಾದ ದರ್ಶನ್ ಹಾಗೂ ಸಚಿನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ಸಂಬಂಧ ತನಿಖೆ ಕೈಗೊಂಡಿದ್ದ ಮದ್ದೂರು ಪೊಲೀಸರು, ನಗರದ ಆಸುಪಾಸಿನಲ್ಲಿ ಕೊಲೆಗೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳಾದ ದರ್ಶನ್, ಲಂಕೇಶ್, ಸಚಿನ್, ಧನುಷ್, ಸಿದ್ದರಾಜು, ಲೋಹಿತ್, ಮಹೇಶ್, ಸಚಿನ್ ಆಲಿಯಾಸ್ ಕಪ್ಪೆ, ಸಂಜಯ್ ಗೌಡ, ವಿಜಯ್, ನಿತಿನ್ ಹಾಗೂ ಕೊಲೆ ಯತ್ನಕ್ಕೆ ಸೇರಿದ ಪ್ರಕಣ ಸಂಬಂಧ ಮಾದೇಶ್, ಮನೋಜ್, ಮನ್ವಿತ್, ದರ್ಶನ್, ಹೇಮಂತ್, ಸಚಿನ್,ಅಭಯ್ ಸೇರಿದಂತೆ 9 ಮಂದಿ, ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *