Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಮಗಳ ಖಾಯಿಲೆಗೆ ಹಣ ಹೊಂದಿಸಲಾಗದೇ ವಿಷವನ್ನು ಹಾಕಿದ ತಂದೆ…

ಉತ್ತರ ಕನ್ನಡ: ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲದೇ ಹೆತ್ತ ತಂದೆಯೇ ಮಗಳಿಗೆ ವಿಷ ಉಣಿಸಿ ಸಾಯಿಸಿದ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಕುಂಬ್ರಿಯಲ್ಲಿ ನಡೆದಿದೆ. ನಾಗರಾಜ್ ಪೂಜಾರಿ (44) ಮಗಳಿಗೆ ವಿಷ ನೀಡಿರುವ ಆರೋಪಿ. ಈ ಆರೋಪಿಗೆ 11 ವರ್ಷದ ನಯನಾ ಅನ್ನೋ ಮಗಳಿದ್ದಳು. ಈ ಬಾಲಕಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಳು. ಮಗಳನ್ನು ಗುಣಪಡಿಸಲು ಅದೆಷ್ಟೋ ಆಸ್ಪತ್ರೆಗೆ ತಿರುಗಿ ಕೈ ಸೋತು ಕೂತಿದ್ದರು. ಅಲ್ಲದೇ ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದ ಸ್ಥಿತಿಗೆ ನಾಗರಾಜ್ ಪೂಜಾರಿ ಬಂದಿದ್ದರು. ಕೊನೆಗೆ ಎಷ್ಟೇ ಪ್ರಯತ್ನ ಪಟ್ಟರೂ ಹಣ ಹೊಂದಿಸಲು ಸಾಧ್ಯವಾಗದೇ ಇದ್ದಾಗ, ತನ್ನ ಹೃದಯ ಗಟ್ಟಿ ಮಾಡಿಕೊಂಡಿದ್ದ ಈ ತಂದೆ ಮಗಳಿಗೇ ವಿಷವನ್ನು ಹಾಕಿ ಬಿಟ್ಟಿದ್ದಾರೆ ಎನ್ನಲಾಗಿದೆ. ಆರೋಪಿ ನಾಗರಾಜ್​ ಪೂಜಾರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರಲ್ಲಿ ನಯನಾ ಕೊನೆಯ ಮಗಳಾಗಿದ್ದಳು.ಈ ಹಿಂದೆ ದಾನಿಗಳ ಸಹಾಯದಿಂದ ಈಕೆಗೆ ಬೈಪಾಸ್ ಸರ್ಜರಿ ಸಹ ಮಾಡಿಸಲಾಗಿತ್ತು. ಆದರೂ ಮಗಳು ಸಂಪೂರ್ಣ ಗುಣಮುಖವಾಗಿರಲಿಲ್ಲ, ಜೊತೆಗೆ ಚಿಕಿತ್ಸೆಗೆ ಅಂತ ಹೆಚ್ಚು ಹಣ ಖರ್ಚು ಮಾಡಿದ್ದರಿಂದ ಕುಟುಂಬದಲ್ಲಿ ನೆಮ್ಮದಿ ಇಲ್ಲದೇ ನಾಗರಾಜ್ ಮದ್ಯ ವ್ಯಸನಿಯಾಗಿದ್ದ ಎನ್ನಲಾಗಿದೆ. ಅಲ್ಲದೇ ಈತನ ಹೆಂಡತಿ ಕೂಡ ಮನೆ ಬಿಟ್ಟು ಹೋಗಿದ್ದಳಂತೆ. ಈ ಎಲ್ಲ ಬೆಳವಣಿಗೆಗಳಿಂದ ಇನ್ನಷ್ಟು ಕುಪಿತನಾದ ಈತ ಮಗಳಿಗೆ ವಿಷ ನೀಡಿ ಹತ್ಯೆಗೈದಿದ್ದಾನೆ‌ ಎನ್ನಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ನಾಗರಾಜ್ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *