Breaking News

ಪ್ರೇಯಸಿಯ ಕಿಡ್ನಾಪ್ ವೇಳೆ ಅಡ್ಡಬಂದ ಮಹಿಳೆಗೆ ಚಾಕು ಇರಿತ – ಚಿಕಿತ್ಸೆ ಫಲಿಸದೇ ಸಾವು!

ಬೆಂಗಳೂರಲ್ಲಿ ಘೋರ ದುರಂತ ಸಂಭವಿಸಿದೆ. ಪ್ರೀತಿಸಿದವಳ ಕಿಡ್ನ್ಯಾಪ್ ವೇಳೆ ಚಾಕು ಇರಿತಕ್ಕೆ ಒಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಆಡುಗೋಡಿಯಲ್ಲಿ ಘಟನೆ ನಡೆದಿದೆ. ಚಿಕಿತ್ಸೆ ಫಲಿಸದೇ ಸೋದರ ಅತ್ತೆ ಮಾಗೇಶ್ವರಿ (55) ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ. ಕಳೆದ ಮಾ.25 ರಂದು ಆಡುಗೋಡಿ ಮನೆಯಲ್ಲಿ ಮಾಗೇಶ್ವರಿಗೆ ಚಾಕು ಇರಿಯಲಾಗಿತ್ತು. ಮಾಗೇಶ್ವರಿ ಅಣ್ಣನ ಮಗ ಕಿರಣ್‌ಗೆ ಮದುವೆಯಾಗಿತ್ತು. ಆದರೂ ಮಾಗೇಶ್ವರಿ ಸಂಬಂಧಿಯೊಬ್ಬಳನ್ನು ಕರೆದುಕೊಂಡು ಹೋಗಿದ್ದನು . ಕೆಲ ದಿನಗಳ ಹಿಂದೆ ಕಿರಣ್ ಬಿಟ್ಟು ಬಂದಿದ್ದ ಆಕೆ ಅಜ್ಜಿ ಜೊತೆ ಇದ್ದಳು. ಮಾ.25 ರಂದು ಆಕೆಯನ್ನು ಹುಡುಕಿಕೊಂಡು ಕಿರಣ್ & ಫ್ಯಾಮಿಲಿ ಬಂದಿತ್ತು. ಬಲವಂತವಾಗಿ ಆಕೆಯನ್ನ ಕಿಡ್ನ್ಯಾಪ್ ಮಾಡಿ ಕರ್ಕೊಂಡು ಹೋಗಿದ್ದರು. ತಡೆಯಲು ಬಂದ ಮಾಗೇಶ್ವರಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಬಳಿಕ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ಮಧ್ಯರಾತ್ರಿ ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ಮನಿಕಿರಣ್, ಅಭಿಷೇಕ್, ಮನಿರಾಜ್, ಮಣಿವಣ್ಣನ್ ಬಂಧಿಸಲಾಗಿದೆ. ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮಾಗೇಶ್ವರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *