Breaking News

ಜಿಗಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ನಟೋರಿಯಸ್ ದರೋಡೆಕೋರರು ಅಂದರ್

ಬೆಂಗಳೂರು: ಜಿಗಣಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಕುಖ್ಯಾತ ದರೋಡೆಕೋರರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಒಬ್ಬ ಆರೋಪಿ ದೈಹಿಕವಾಗಿ ಒಂದು ಕಾಲನ್ನು ಕಳೆದುಕೊಂಡಿದ್ದರೂ, ದರೋಡೆ ಮಾಡಿ ಪರಾರಿಯಾಗುವಲ್ಲಿ ನಿಸ್ಸೀಮನಾಗಿದ್ದ.ಈ ಜೋಡಿ ಜಿಗಣಿ ಕೈಗಾರಿಕಾ ಪ್ರದೇಶದ ಸುತ್ತಮುತ್ತಲ ಜನರಲ್ಲಿ ಭೀತಿ ಹುಟ್ಟಿಸಿತ್ತು. ಈ ತಂಡ ಕೇವಲ ಸಾಮಾನ್ಯರನ್ನಷ್ಟೇ ಅಲ್ಲದೆ, ಪ್ರಭಾವಿ ವ್ಯಕ್ತಿಗಳನ್ನೂ ಬಿಟ್ಟಿರಲಿಲ್ಲ. ಇವರು ಇತ್ತೀಚೆಗೆ ಶಾಸಕರೊಬ್ಬರ ಕಾರಿನ ಗಾಜನ್ನು ಪುಡಿಮಾಡಿ, ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡುವ ಮೂಲಕ ಪೋಲೀಸರಿಗೆ ಸವಾಲು ಹಾಕಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಬಲೆ ಬೀಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಈ ಆರೋಪಿಗಳು ಕೃತ್ಯವೆಸಗಲು ಅತೀ ಎತ್ತರದ ಗೋಡೆಗಳನ್ನು ಹತ್ತುವ ಮತ್ತು ಸಿಸಿಟಿವಿಗಳ ಕಣ್ಣು ತಪ್ಪಿಸುವ ವಿಚಿತ್ರ ಕೌಶಲ್ಯ ಹೊಂದಿದ್ದರು. ಅರಕಲಗೂಡು ಶಾಸಕರ ಕಾರಿಗೆ ಕನ್ನ ಹಾಕಿದ್ದೂ ಸೇರಿದಂತೆ ಹಲವು ಹೈ ಪ್ರೊಫೈಲ್ ಕಳ್ಳತನಗಳ ರಹಸ್ಯ ಈ ಮೂಲಕ ಬಯಲಾಗಿದೆ. ಬಂಧಿತರಿಂದ ಕಳವು ಮಾಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಬ್ಬ ಕಾಲು ಇಲ್ಲದಿದ್ದರೂ ಈತ ಇಷ್ಟೊಂದು ಚಾಕಚಕ್ಯತೆಯಿಂದ ದರೋಡೆ ಮಾಡುತ್ತಿದ್ದ ರೀತಿ ಕಂಡು ಸ್ವತಃ ಪೊಲೀಸರೇ ದಂಗಾಗಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *