👆News Audio
ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ ಯಾರು…?
ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವವರು ಯಾರು..?ಹೆಲ್ಮೆಟ್ ಇಲ್ಲ… ನಂಬರ್ ಪ್ಲೇಟ್ ಇಲ್ಲ…
ತ್ರಿಬಲ್ ರೈಡಿಂಗ್‌ಗೆ ಕಡಿವಾಣವಿಲ್ಲ… ನೋ ಪಾರ್ಕಿಂಗ್‌ನಲ್ಲೇ ವಾಹನಗಳ ದರ್ಬಾರ್!ಹುಬ್ಬಳ್ಳಿ–ಧಾರವಾಡದಲ್ಲಿ ಸಂಚಾರ ನಿಯಮಗಳಿಗೆ ಬೆಲೆಯೇ ಇಲ್ವಾ? ನಿಯಮ ಉಲ್ಲಂಘಿಸುವವರಿಗೆ ಕಾನೂನಿನ ಭಯವೇ ಇಲ್ವಾ..?

ಇದೀಗ ಅಪ್ರಾಪ್ತರ ಬೈಕ್ ಸವಾರಿಯ ಅವಾಂತರವೂ ಮುನ್ನೆಲೆಗೆ ಬಂದಿದೆ. ಹುಬ್ಬಳ್ಳಿಯಲ್ಲಿ ಅಪ್ರಾಪ್ತರು ಬೈಕ್ ಚಲಾಯಿಸಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ, ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪ್ರಾಪ್ತರ ಕೈಗೆ ಬೈಕ್ ಕೊಡುವವರು ಯಾರು…? ವಾಹನ ಚಲಾಯಿಸಲು ವಯಸ್ಸು ಮತ್ತು ಪರವಾನಗಿ ಅಗತ್ಯ ಎಂಬ ಕನಿಷ್ಠ ಜವಾಬ್ದಾರಿ ಪೋಷಕರಿಗಿಲ್ಲವೇ..?
ಈ ಘಟನೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ರಸ್ತೆ ಮೇಲೆ ನಿಯಮ ಉಲ್ಲಂಘನೆಗಳು ನಡೆಯುತ್ತಿದ್ದರೆ ಅವುಗಳನ್ನು ತಡೆಯುವವರು ಯಾರು..?
ಸಂಚಾರ ಪೊಲೀಸರ ಕಣ್ಣೆದುರೇ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು, ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳ ಓಡಾಟ, ತ್ರಿಬಲ್ ರೈಡಿಂಗ್ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳುವವರು ಯಾರು..?
ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ದುರಂತ ಇಡೀ ನಗರವನ್ನು ಬೆಚ್ಚಿಬೀಳಿಸಿತ್ತು. ಈಗ ಅಪ್ರಾಪ್ತರ ಬೈಕ್ ಸವಾರಿ ಮತ್ತು ಅಪಘಾತದ ಘಟನೆಗಳು ಸಂಚಾರ ಸುರಕ್ಷತೆಯ ಬಗ್ಗೆ ಮತ್ತಷ್ಟು ಆತಂಕ ಮೂಡಿಸಿವೆ…
ಹೆಲ್ಮೆಟ್ ಧರಿಸುವುದು ಜೀವ ರಕ್ಷಣೆಗೆ ಮುಖ್ಯ. ಆದರೆ ಸಂಚಾರ ಸುರಕ್ಷತೆ ಎಂದರೆ ಹೆಲ್ಮೆಟ್‌ಗೆ ಮಾತ್ರ ಸೀಮಿತವಲ್ಲ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡದಿರುವುದು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಅಪಾಯಕಾರಿ ಚಾಲನೆಗೆ ಕಡಿವಾಣ ಹಾಕುವುದೂ ಅಷ್ಟೇ ಮುಖ್ಯ…
ಟ್ರಾಫಿಕ್ ಪೊಲೀಸರು ದಂಡ ವಸೂಲಿಗೆ ಮಾತ್ರ ಸೀಮಿತವಾಗಬಾರದು. ಅಪಘಾತ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನುಬದ್ಧವಾಗಿ ಕ್ರಮ ಜರುಗಿಸಬೇಕು…
ಹುಬ್ಬಳ್ಳಿ–ಧಾರವಾಡದ ಪೊಲೀಸ್ ಆಯುಕ್ತರೇ, ಸಂಚಾರ ವಿಭಾಗದ ಅಧಿಕಾರಿಗಳೇ…
ಅಪ್ರಾಪ್ತರ ವಾಹನ ಸವಾರಿಗೆ ಕಡಿವಾಣ ಯಾವಾಗ? ಹೆಲ್ಮೆಟ್ ಇಲ್ಲದ ಸವಾರರ ವಿರುದ್ಧ ಕ್ರಮ ಯಾವಾಗ..? ನಂಬರ್ ಪ್ಲೇಟ್ ಇಲ್ಲದ ವಾಹನಗಳ ತಪಾಸಣೆ ಯಾವಾಗ..?
ರಸ್ತೆಗಳು ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿವೆಯೇ ಹೊರತು, ನಿಯಮ ಉಲ್ಲಂಘನೆಗಳ ಅಡ್ಡೆಯಾಗಲು ಅಲ್ಲ…ಇದು ಸಾರ್ವಜನಿಕರ ಪ್ರಶ್ನೆ… ಅಪಘಾತ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಚಿತವಾಗಿ ಕ್ರಮ ಕೈಗೊಳ್ಳುವುದು ಯಾವಾಗ..?
ಹುಬ್ಬಳ್ಳಿ–ಧಾರವಾಡದ ಸಂಚಾರ ವ್ಯವಸ್ಥೆ ಸುಧಾರಿಸಲಿ… ಅಮಾಯಕ ಜೀವಗಳು ಅಪಘಾತಕ್ಕೆ ಬಲಿಯಾಗುವುದು ನಿಲ್ಲಲಿ!
bigtvnews | Hubli Dharwad News | Kannada News | Karnataka News Hubli News | News In Hubli | Local news

