ವಿಟ್ಲ: ಒಂದು ವರ್ಷದ ಹಿಂದೆ ಆದ ಗಲಾಟೆಯ ಬಗ್ಗೆ ಮತ್ತೆ ತಕರಾರೆತ್ತಿ ಪರಿಚಯಸ್ಥ ವ್ಯಕ್ತಿ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ ಘಟನೆ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಮಾಣಿ ನಿವಾಸಿ ವಿಶ್ವನಾಥ (28) ಅವರು ಎ.12ರಂದು ಸಂಜೆ ಮನೆಯಲ್ಲಿದ್ದಾಗ, ಆತನ ಪರಿಚಯಸ್ತ ನವೀನ್ ಎಂಬಾತ ಬಂದು, ಒಂದು ವರ್ಷದ ಹಿಂದೆ ನಡೆದಿದ್ದ ಗಲಾಟೆ ಬಗ್ಗೆ ತಕರಾರು ತೆಗೆದು ಕಲ್ಲಿನಿಂದ ಹಲ್ಲೆ ನಡೆಸಿದ್ದು, ಜೀವಬೆದರಿಕೆ ಒಡ್ಡಿದ್ದಾನೆ.ಗಾಯಗೊಂಡ ವಿಶ್ವನಾಥ ಅವರನ್ನು, ನೆರೆಕೆರೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬರಿಮಾರು ನಿವಾಸಿ ಪಿ. ನವೀನ (43)ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

