Breaking News

ರೌಡಿಶೀಟರ್ ಜೊತೆ ಶಾಸಕನ ಬರ್ತ್‌ಡೇ ಸಂಭ್ರಮ..!ಕಳೆದ ವರ್ಷ ಪಿಐ ಸಸ್ಪೆಂಡ್… ಈ ವರ್ಷ ಶಾಸಕರ ಎಂಟ್ರಿಗೆ ಭಾರೀ ವಿವಾದ..!

ರೌಡಿಶೀಟರ್ ಜೊತೆ ಬಿಜೆಪಿ ಶಾಸಕ..!ಪಿಐಗೆ ಅಮಾನತು… ಶಾಸಕರ ಭೇಟಿ ವೈರಲ್..!

ಬೆಂಗಳೂರು: ಕಳೆದ ವರ್ಷ ಇದೇ ರೌಡಿಶೀಟರ್‌ನ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜ್ ಅವರನ್ನು ಇಲಾಖೆ ಅಮಾನತುಗೊಳಿಸಿತ್ತು. ಆದರೆ, ಅದೇ ರೌಡಿಶೀಟರ್‌ನ ಈ ವರ್ಷದ ಹುಟ್ಟುಹಬ್ಬದಲ್ಲಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಸ್ವತಃ ಭಾಗವಹಿಸಿರುವ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿ ಹೊಸ ವಿವಾದಕ್ಕೆ ಕಾರಣವಾಗಿವೆ…

ಯಲಹಂಕ ಕ್ಷೇತ್ರದ ಆಲೂರು ಪ್ರದೇಶದಲ್ಲಿ ನಡೆದ ರೌಡಿಶೀಟರ್ ದಾಸ ಅಲಿಯಾಸ್ ಕಿಂಗ್ ಮೇಕರ್” ದಾಸನ ಅದ್ದೂರಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ಕೇಕ್ ಕತ್ತರಿಸಿ, ದಾಸನಿಗೆ ಸಿಹಿ ತಿನಿಸಿ ಶುಭಾಶಯ ಕೋರಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ…

ಕಳೆದ ವರ್ಷ ಇದೇ ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜ್ ಭಾಗವಹಿಸಿದ್ದಕ್ಕಾಗಿ ಇಲಾಖೆ ಅವರನ್ನು ತಕ್ಷಣವೇ ಅಮಾನತುಗೊಳಿಸಿತ್ತು. ಪೊಲೀಸ್ ಅಧಿಕಾರಿಗೆ ಒಂದು ನ್ಯಾಯ, ಜನಪ್ರತಿನಿಧಿಗೆ ಮತ್ತೊಂದು ನ್ಯಾಯವೇ ಎಂಬ ಪ್ರಶ್ನೆಯನ್ನು ಇದೀಗ ಸಾರ್ವಜನಿಕರು ಎತ್ತುತ್ತಿದ್ದಾರೆ…

ದಾಸ ಚಿಕ್ಕಜಾಲ ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿದ್ದು, ಯಲಹಂಕ, ನೆಲಮಂಗಲ ಹಾಗೂ ದಾಸರಹಳ್ಳಿ ಭಾಗಗಳಲ್ಲಿ ಭೂ ಒತ್ತುವರಿ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳನ್ನು ಎದುರಿಸುತ್ತಿದ್ದಾನೆ…

ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕಿದ್ದು, ಮುಂದಿನ ಕ್ರಮದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ…

ಒಬ್ಬ ಪೊಲೀಸ್ ಅಧಿಕಾರಿ ರೌಡಿಶೀಟರ್ ಜೊತೆ ಕಾಣಿಸಿಕೊಂಡಿದ್ದಕ್ಕೆ ಅಮಾನತು ಶಿಕ್ಷೆ ಎದುರಿಸಬೇಕಾಯಿತು. ಈಗ ಅದೇ ರೌಡಿಶೀಟರ್ ಜೊತೆ ಶಾಸಕರು ಸಾರ್ವಜನಿಕವಾಗಿ ವೇದಿಕೆ ಹಂಚಿಕೊಂಡಿರುವುದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Share News

About Shaikh BigTv

Check Also

ಆಕಸ್ಮಿಕ ಬೆಂಕಿ: ಸ್ಕಾರ್ಪಿಯೋ ಕಾರು ಸುಟ್ಟು ಭಸ್ಮ

ವಿಜಯಪುರ: ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಟ್ಟು ಭಸ್ಮವಾಗಿರುವ ಘಟನೆ ನಗರದ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ (ಜು.18) …

Leave a Reply

Your email address will not be published. Required fields are marked *