Breaking News

ಧ್ವಜಾರೋಹಣದ ವೇಳೆ ಮಹಾ ಎಡವಟ್ಟು‌ : ಸೂಕ್ತ ಕ್ರಮಕ್ಕೆ ಗ್ರಾಮಸ್ಥರಿಂದ ಆಗ್ರಹ


ಹುಬ್ಬಳ್ಳಿ:ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ಲ ಗ್ರಾಮದಲ್ಲಿ ಧ್ವಜಾರೋಹಣದ ವೇಳೆ ಮಹಾ ಎಡವಟ್ಟು‌ ಸಂಭವಿಸಿದೆ.

ಮೊದಲಿಗೆ ಮುಕ್ಕಲ್ಲ ಸರ್ಕಾರಿ ಅನುದಾನಿತ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಧ್ವಜವನ್ನು ಉಲ್ಟಾ ಹಾರಿಸಲಾಗಿದ್ದು, ಎರಡು ಪ್ರತ್ಯೇಕ ಸ್ಥಳದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ. ಶಾಲಾ ಅಧ್ಯಕ್ಷ ಮತ್ತು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಲಿಂಗರೆಡ್ಡಿ ಉಲ್ಟಾ ಧ್ವಜಾರೋಹಣ ಮಾಡಿದ್ದಾರೆ. ಮೊದಲಿಗೆ ಉಲ್ಟಾ ಹಾರಿದ ಧ್ವಜಾರೋಹಣ ನೆರವೇರಿಸಿ ನಂತರ ಬಳಿಕ ಧ್ವಜ ಕೇಳಗಿಳಿಸಿ ಮತ್ತೆ ಸರಿಯಾಗಿ ಧ್ವಜಾರೋಹಣ ನಡೆಯಿತು.

ನಂತರ ನೇಹರು ಯುವಕ ಮಂಡಳ ಮುಂದೆ ಧ್ವಜಾರೋಹಣ ವೇಳೆ ಧ್ವಜ ಕಳಚಿ ಬಿದ್ದಿದೆ. ಈ ಧ್ವಜಾರೋಹಣವನ್ನು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ ನೆರವೇರಿಸಿದರು. ಈ ಘಟನೆಗೆ ಗ್ರಾಮದ ಪ್ರಜ್ಞಾವಂತ ನಾಗರಿಕರಿಂದ ಆಕ್ರೋಶ ವ್ಯಕ್ತಪಡಿಸಿದರು. ಈ ಎಡವಟ್ಟಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ ವ್ಯಕ್ತಪಡಿಸಿದರು.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *