Breaking News

ವರದಿಗೆ ತೆರಳಿದ ಸಂದರ್ಭ ಹ*ಲ್ಲೆ ಆರೋಪ

ಕೋಟ: ಸರಕಾರಿ ಜಾಗದ ಒತ್ತುವರಿ ಕುರಿತು ವರದಿಗೆ ತೆರಳಿದ ಸಂದರ್ಭ ಹಲ್ಲೆ ನಡೆಸಲಾಗಿದೆ ಎಂದು ಕೋಟ ಮೂಡುಗಿಳಿಯಾರು ನಿವಾಸಿ ಆರತಿ ಗಿಳಿಯಾರು ಕೋಟ ಪೊಲೀಸ್‌ ಠಾಣೆಯಲ್ಲಿ ಎ.15ರಂದು ಪ್ರಕರಣ ದಾಖಲಿಸಿದ್ದಾರೆ. ಆರತಿ ಗಿಳಿಯಾರು ಬ್ರಹ್ಮಾವರ ತಾಲೂಕು ನ್ಯೂಸ್‌ ಪತ್ರಿಕೆ ಉಪಸಂಪಾದಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ವಡ್ಡರ್ಸೆ ಗ್ರಾಮದ ಪ್ರಣುತ್‌ ಗಾಣಿಗ ತನ್ನ ಮನೆ ಹತ್ತಿರ ಸರಕಾರಿ ಜಾಗ ಒತ್ತುವರಿ ಮಾಡಿ ಶೆಡ್‌ ನಿರ್ಮಾಣ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ವರದಿ ಮಾಡುತ್ತಿದ್ದ ಸಂಧರ್ಭದಲ್ಲಿ ಪ್ರಣುತ್‌ ಹಾಗೂ ಆತನ ಚಿಕ್ಕಮ್ಮ ಜತೆಯಾಗಿ ಆರತಿ ಗಿಳಿಯಾರು ಮೇಲೆ ಹಲ್ಲೆ ನಡೆಸಿ ದಲಿತ ಎನ್ನುವ ಕಾರಣಕ್ಕೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *