ಬೆಂಗಳೂರು: ದೇವಸ್ಥಾನಕ್ಕೆ ಬರುವುದು ಮನಸ್ಸಿನ ಶಾಂತಿಗಾಗಿ ಮತ್ತು ದೇವರಿಗೆ ನಮಸ್ಕರಿಸಲು. ಆದರೆ ಇಲ್ಲೊಬ್ಬ ಕಿಲಾಡಿ ಕಳ್ಳ ದೇವರಿಗೆ ಕೈಮುಗಿಯುತ್ತಲೇ ಪಕ್ಕದಲ್ಲಿದ್ದವರ ಮೊಬೈಲ್ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾರತಹಳ್ಳಿಯ ಹನುಮಂತರಾಯ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಕಳೆದ ತಿಂಗಳು 26ರ ಗುರುವಾರದಂದು ದೇವಸ್ಥಾನಕ್ಕೆ ಬಂದಿದ್ದ ಈ ವ್ಯಕ್ತಿ, ಹನುಮಂತನಿಗೆ ಪ್ರದಕ್ಷಿಣೆ ಹಾಕಿದ್ದಾನೆ. ದೇವರ ಮುಂದೆ ನಿಂತು ಅತ್ಯಂತ ಭಕ್ತಿಯಿಂದ “ಒಳ್ಳೆಯದನ್ನು ಮಾಡಪ್ಪ” ಎಂದು ಬೇಡಿಕೊಳ್ಳುವಂತೆ ನಟಿಸುತ್ತಲೇ, ಪಕ್ಕದಲ್ಲಿದ್ದವರ ಬೆಲೆಬಾಳುವ ಐಫೋನ್ 16 ಅನ್ನು ಜೇಬಿಗಿಳಿಸಿಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಕಳ್ಳನ ಈ ಸಂಪೂರ್ಣ ಕೈಚಳಕ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭಕ್ತಿಯ ಸೋಗಿನಲ್ಲಿ ಮೊಬೈಲ್ ಕಳ್ಳತನ ಮಾಡಿದ ಈ ದೃಶ್ಯಗಳು ಇದೀಗ ಲಭ್ಯವಾಗಿದ್ದು, ಕಳ್ಳನಿಗಾಗಿ ಹುಡುಕಾಟ ಮುಂದುವರಿದಿದೆ. ಸಾರ್ವಜನಿಕರು ದೇವಸ್ಥಾನದಂತಹ ಜನನಿಬಿಡ ಪ್ರದೇಶಗಳಲ್ಲಿ ತಮ್ಮ ವಸ್ತುಗಳ ಬಗ್ಗೆ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

