Breaking News

ಹೊಸ ಉಪ ವಂಶಾವಳಿಯಾಗಿರುವ ಬಿಎ 2.75 ಪತ್ತೆ


ನವದೆಹಲಿ: ಭಾರತದಲ್ಲಿ ಕೊವಿಡ್-19 ವೈರಸ್ ಒಮಿಕ್ರಾನ್ ರೂಪಾಂತರದ ಹೊಸ ಉಪ ವಂಶಾವಳಿಯಾಗಿರುವ ಬಿಎ 2.75 ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ  ಮಾಹಿತಿ ನೀಡಿದೆ.

ಕಳೆದ ಎರಡು ವಾರಗಳಲ್ಲಿ ಜಾಗತಿಕವಾಗಿ ವರದಿಯಾದ ಕೊವಿಡ್-19 ಪ್ರಕರಣಗಳು ಸುಮಾರು ಶೇ. 30ರಷ್ಟು ಹೆಚ್ಚಾಗಿದೆ ಎಂದು ಡಬ್ಲುಹೆಚ್​ಓ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಯುರೋಪ್ ಮತ್ತು ಅಮೆರಿಕಾದಲ್ಲಿ BA.4 ಮತ್ತು BA.5 ಪ್ರಕರಣಗಳು ಕಾಣಿಸಿಕೊಂಡಿವೆ. ಭಾರತದಂತಹ ದೇಶಗಳಲ್ಲಿ BA 2.75ನ ಹೊಸ ಉಪ ವಂಶಾವಳಿಯನ್ನು ಸಹ ಪತ್ತೆಹಚ್ಚಲಾಗಿದೆ. ನಾವು ಆ ಬಗ್ಗೆ ಗಮನವಿಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ BA 2.75 ಮೊದಲ ಕೇಸ್ ಪತ್ತೆಯಾದ ನಂತರ ಇನ್ನೂ 10 ದೇಶಗಳಲ್ಲಿ ಈ ಉಪ-ರೂಪಾಂತರಿ ವೈರಸ್ ತಳಿ ಪತ್ತೆಯಾಗಿದೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *