Breaking News

ಫೆಬ್ರವರಿ ೨೪ ರಂದು ಪ್ಯಾನ್ ಇಂಡಿಯಾ ಸಿನಿಮಾ ರಾಜ್ಯಾದ್ಯಂತ ತೆರೆಗೆ..

ಹುಬ್ಬಳ್ಳಿ: ರಿಯಾನ್ಸಿ ಫಿಲ್ಮ್ ಬ್ಯಾನರ್ ನಡಿ ನಿರ್ಮಾಣದ ಸೌಂತ್ ಇಂಡಿಯನ್ ಸಿನಿಮಾ ರಾಜ್ಯಾದ್ಯಂತ ಫೆಬ್ರವರಿ ೨೪ ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ನರೇಶ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಸ್ಟ್ ರ್ಯಾಂಕ್ ರಾಜು ಅಂತಹ ಹಿಟ್ ಸಿನಿಮಾಗಳ ನಂತರ ಇದೀಗ ಸೌಂತ್ ಇಂಡಿಯನ್ ಸಿನಿಮಾ ನಿರ್ದೇಶನ ಮಾಡಿದ್ದು, ಚಿತ್ರದ ಕಥೆ ಅದ್ಭುತವಾಗಿ ಮೂಡಿ ಬಂದಿದೆ ಎಂದ ಅವರು ಚಿತ್ರದಲ್ಲಿ ನಾಯಕ ನಟನಾಗಿ ಸಾರ್ಥಕ ಹಾಗೂ ನಾಯಕಿಯಾಗಿ ಕಾಶೀಮಾ ರಫಿ ನಟಿಸಿದ್ದಾರೆ ಎಂದರು.

ಈ ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಷೆ ಶೈಲಿಯಲ್ಲಿ ಮೂಡಿ ಬಂದಿದ್ದು, ಉತ್ತರ ಕರ್ನಾಟಕದ ಜನತೆಗೆ ಇಷ್ಟವಾಗುವಂತಹ ಸಿನಿಮಾ ಇದಾಗಿದೆ.

ಚಿತ್ರದಲ್ಲಿ ೪ ಹಾಡುಗಳು ಇದ್ದು,
ಹಂಪಿ, ಬೆಂಗಳೂರು, ಲಡಾಕ್ ನಲ್ಲಿ ಚಿತ್ರೀಕರಣವಾಗಿದೆ. ರಾಜ್ಯಾದ್ಯಂತ ೧೦೦ ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ‌.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ ನಟ ಸಾರ್ಥಕ, ನಟಿ ಕಾಶೀಮಾ ರಫಿ, ಸಹನಟ ಅಮಿತ್, ಜಗದೀಶ್ ನಡನಳ್ಳಿ ಉಪಸ್ಥಿತರಿದ್ದರು.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *