ಬೆಂಗಳೂರು: ನೈಸ್ ರಸ್ತೆ ಟೋಲ್ ಪ್ಲಾಜಾದಲ್ಲಿ ಓವರ್ ಲೋಡ್ ಟ್ರಕ್ ಬಿಡಲು ಲಂಚ ಪಡೆದ ಆರೋಪದಡಿ ಇಬ್ಬರು ಪ್ರೊಬೇಷನರಿ ಮೋಟಾರ್ ವೆಹಿಕಲ್ ಇನ್‌ಸ್ಪೆಕ್ಟರ್‌ಗಳು ಸೇರಿ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನೆಲಮಂಗಲ ಆರ್‌ಟಿಒ ಕಚೇರಿ ಪ್ರೊಬೇಷನರಿ ಮೋಟರ್ ವೆಹಿಕಲ್ ಇನ್‌ಸ್ಪೆಕ್ಟರ್‌ಗಳಾದ ಕಿರಣ್ (37) ಮತ್ತು ದಿನೇಶ್ ಕುಮಾರ್ (48) ಮತ್ತು ಮಧ್ಯವರ್ತಿ ಲಾರಿ ಚಾಲಕ ರಮೇಶ್ (40) ಬಂಧಿತರು. ಮಹಾರಾಷ್ಟ್ರದ ಪ್ರಶಾಂತ್ ದತ್ತಾತ್ರೇಯ ಜಾಧವ್ ಎಂಬವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದರು. ಓವರ್ ಲೋಡ್ ಟ್ರಕ್ ಟೋಲ್ ಪ್ಲಾಜಾ ದಾಟಿ ಹೋಗಲು ಪ್ರಶಾಂತ್ ದತ್ತಾತ್ರೇಯ ಅವರಿಗೆ 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಸಂಬಂಧ ಪ್ರಶಾಂತ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಈ ಇಬ್ಬರು ಇನ್‌ಸ್ಪೆಕ್ಟರ್‌ಗಳ ಪರವಾಗಿ ಮಧ್ಯವರ್ತಿ ರಮೇಶ್ ಟ್ರಕ್ ಚಾಲಕನಿಂದ 300 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

