Breaking News

ಆಟೋ ಸೈಡ್‌ಗೆ ಹಾಕಿ ಎಂದ ಸುನಿಲ್ ಸಹೋದರರ ಮೇಲೆ ಜಮೀರ್ ಸಹೋದರರಿಂದ ಮಾರಣಾಂತಿಕ ಹಲ್ಲೆ!

ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಹಿಂದೂ ಸಹೋದರಿಬ್ಬರ ಮೇಲೆ ಮುಸ್ಲಿಂ ಸಹೋದರರು ಸೇರಿಕೊಂಡು ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಶನಿವಾರ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ತೋಟೆಂದ್ರ ಮತ್ತು ಸುನಿಲ್ ಸಹೋದರರು, ರಸ್ತೆ ಮೇಲೆ ಅಡ್ಡಾ- ದಿಡ್ಡಿಯಾಗಿ ನಿಲ್ಲಿಸಲಾಗಿದ್ದ ಆಟೋಗಳನ್ನು ಸ್ವಲ್ಪ ಸೈಡಿಗೆ ಹಾಕಿ ಎಂದು ಹೇಳಿದ್ದಾರೆ.ಈ ವೇಳೆ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರಾದ ಸೈಫಾಬ್ ಒಂಟಿ, ಆರಿಫ್, ಆಸಿಫ್, ಇಮ್ರಾನ್ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಜಮೀರ್ ಹಾಗೂ ಅವರ ಸಹೋದರು ಸುನೀಲ್ ಸಹೋದರರ ಮೇಲೆ ಕಟ್ಟಿಗೆಯಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ತೋಟೆಂದ್ರ ಮತ್ತು ಸುನಿಲ್ ಕುಟುಂಬಸ್ಥರು ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಹಲ್ಲೆ ಮಾಡಿದ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *