ಅಕ್ರಮ ಸಂಬಂಧ ಶಂಕಿಸಿ ಪತಿಯೊಬ್ಬ ಪತ್ನಿಯ ಪ್ರಾಣ ತೆಗೆದಿರುವ ಘಟನೆ ಕೊಯಮತ್ತೂರುನಲ್ಲಿ ನಡೆದಿರುವುದು ವರದಿಯಾಗಿದೆ. ಬಾಲಮುರುಗನ್‌ಗೆ ಪತ್ನಿ ಶ್ರೀಪ್ರಿಯಾಳ ಬೇರೊಬ್ಬರ ಜತೆ ಸಂಬಂಧ ಇಟ್ಟುಕೊಂಡಿದ್ದಾಳೆ ಎನ್ನುವ ಸಂಶಯ ಬಂದಿದೆ. ಈ ಕಾರಣದಿಂದ ಇತ್ತೀಚೆಗೆ ಪತಿ ಬಾಲಮುರುಗನ್ ಪತ್ನಿ ಕೆಲಸ ಮಾಡುತ್ತಿರುವ ಹಾಸ್ಟೆಲ್‌ಗೆ ಭೇಟಿ ನೀಡಿದ್ದಾನೆ. ಹೊರಗೆ ಬರುವಂತೆ ಪತ್ನಿಗೆ ಹೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಬಾಲಮುರುಗನ್ ಮೃತದೇಹದ ಬಳಿಯೇ ಕೂತಿದ್ದು, ಸೆಲ್ಫಿ ತೆಗೆದುಕೊಂಡಿದ್ದಾನೆ, “ದ್ರೋಹಕ್ಕೆ ಶಿಕ್ಷೆ ಸಾವು” ಎಂದು ಬರೆದುಕೊಂಡು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾನೆ.
ಪೊಲೀಸರು ಬರುವವರೆಗೂ ಬಾಲಮುರುಗನ್ ಕೃತ್ಯ ನಡೆದ ಸ್ಥಳದಲ್ಲೇ ಕೂತಿದ್ದಾನೆ. ರತ್ನಪುರಿ ಪೊಲೀಸರು ಬಾಲಮುರುಗನ್ ಅವರನ್ನು ಬಂಧಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

