Breaking News

ಒಂದೇ ಪರವಾನಿಗೆ: ಹೆಚ್ಚಿನ ಕಲ್ಲು ಸಾಗಾಟ; ಕೇಸು

ಪುತ್ತೂರು: ಒಂದೇ ಪರವಾನಿಗೆ ಪಡೆದು ಹೆಚ್ಚಿನ ಟ್ರಿಪ್ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪುತ್ತೂರು ಪೊಲೀಸರು ಮುರದಲ್ಲಿ ತಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪುತ್ತೂರು ಸಂಚಾರ ಪೊಲೀಸ್‌ ಠಾಣಾ ಪಿಎಸ್‌ಐ ಸುಹಾಸ್ ಆರ್. ಅವರು ದೂರು ನೀಡಿದ್ದು, ಅವರು ಮೇ 1ರಂದು ಸಂಜೆ ಮುರದಲ್ಲಿ ವಾಹನ ತಪಾಸಣೆಯ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕೆಂಪುಕಲ್ಲು ತುಂಬಿದ ಲಾರಿಯೊಂದು ಆಗಮಿಸಿದೆ. ಈ ವೇಳೆ ಲಾರಿಯನ್ನು ತಡೆದು ವಿಚಾರಿಸಿದಾಗ ಚಾಲಕ ನಾರಾಯಣ ರೈ ಕೆ. ಎಂಬಾತ ಪೆರುವಾಯಿಯಿಂದ ಉಪ್ಪಿನಂಗಡಿಗೆ ಕಲ್ಲು ಸಾಗಾಟ ಮಾಡುವುದಾಗಿ ತಿಳಿಸಿದ್ದಾನೆ. ಪರವಾನಿಗೆ ಪರಿಶೀಲಿಸಿದಾಗ ಚಿಕ್ಕಮಗಳೂರು ಭಾಗದ ಪರವಾನಿಗೆ ಇದ್ದು, ಮಾಲಕ ರಮೇಶ ಹೇಳಿದಂತೆ ಒಂದೇ ಪರವಾನಿಗೆ ಪಡೆದು ಉಪ್ಪಿನಂಗಡಿ ಭಾಗಕ್ಕೆ 2-3 ಟ್ರಿಪ್ ಕಲ್ಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *