Breaking News

ಯುವಕನ ಕಿರುಕುಳ ಆರೋಪ: ದಂಪತಿ ಆತ್ಮಹತ್ಯೆ

ಯಾದಗಿರಿ: ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ದಂಪತಿ ಯುವಕನೊಬ್ಬನ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶೋಕ ನಗರ ತಾಂಡಾದ ಮಾರುತಿ ಗೋಮ್ಯಾ (25) ಹಾಗೂ ಶಿಲ್ಪಾ ಮಾರುತಿ (21) ಮೃತರು. ರಕ್ಷಾ ಬಂಧನ ಹಬ್ಬಕ್ಕೆ ತವರುಮನೆಗೆ ಬಂದಿದ್ದ ಶಿಲ್ಪಾಗೆ ಅರುಣ್ ಮೇಘ್ಯಾ ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಮನೆಯ ಮುಂದೆ ಓಡಾಡಿ ತೊಂದರೆ ನೀಡುತ್ತಿದ್ದರಿಂದ ದಂಪತಿ ನಡುವೆ ಜಗಳವಾಗಿತ್ತು. ಸೆ.1ರಂದು ಇಬ್ಬರೂ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಶಿಲ್ಪಾ ಮೃತಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಮಾರುತಿ ಸೆ.8ರಂದು ಮೃತಪಟ್ಟಿದ್ದಾರೆ. ಕಿರುಕುಳ ಆರೋಪದಡಿ ಅರುಣ್ ವಿರುದ್ಧ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *