Breaking News

ಬೆಂಕಿ ಅವಘಡ: 10 ಮೇಕೆ, 20 ಕೋಳಿಗಳ ಸಾವು

ರಾಯಚೂರು: ತಾಲ್ಲೂಕಿನ ಬುರ್ದಿಪಾಡ ಗ್ರಾಮದಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿ ಕುರಿ ಶೆಡ್ ಸಂಪೂರ್ಣ ಭಸ್ಮವಾಗಿದ್ದು, 10 ಮೇಕೆಗಳು ಹಾಗೂ 20 ಕೋಳಿಗಳು ಸಜೀವ ದಹನವಾಗಿವೆ. ಒಂದು ಮನೆಗೂ ಹಾನಿಯಾಗಿದೆ. ಗ್ರಾಮದ ನಾಗಮ್ಮ ಅವರಿಗೆ ಸೇರಿದ ಕುರಿ ಶೆಡ್ ಹಾಗೂ ಮನೆ ಈ ಅವಘಡದಲ್ಲಿ ಹಾನಿಗೀಡಾಗಿವೆ. ನಾಗಮ್ಮ ಅವರ ಹೊಲದ ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಹೊಲದಲ್ಲಿ ಕಸಕ್ಕೆ ಬೆಂಕಿ ಹಚ್ಚಲಾಗಿತ್ತು. ಅದರ ಕಿಡಿಗಳು ಗಾಳಿಗೆ ಹಾರಿ ಕುರಿಗಳಿದ್ದ ಶೆಡ್‌ಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಹತ್ತಿ ಮಾರಾಟದಿಂದ ಸಂಗ್ರಹಿಸಿದ್ದ ₹2 ಲಕ್ಷ ನಗದು ಸಹ ಅವಘಡದಲ್ಲಿ ಬೆಂಕಿಗೆ ಆಹುತಿಯಾಗಿದೆ. ಒಟ್ಟಾರೆ ₹3 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *