ದುಬಾರಿ ಕಾರು, ಕಳ್ಳತನದ ದಂಧೆ! ಪಾರ್ಚೂನರ್ ಗ್ಯಾಂಗ್‌ನ ರಹಸ್ಯ ಬಯಲು, ಒಬ್ಬ ಅರೆಸ್ಟ್..
ಹುಬ್ಬಳ್ಳಿ ರಸ್ತೆಯಲ್ಲಿ Toyota Fortuner ಕಾರು ಕಾಣಿಸಿಕೊಂಡರೆ ಸಾಕು ಜನರು ಹುಬ್ಬೇರಿಸುತ್ತಾರೆ. ಅಬ್ಬಾ… ಪಾರ್ಚೂನರ್.! ಅಂತ ಗೌರವದಿಂದ ನೋಡುವಂತಹ ಈ ದುಬಾರಿ ಕಾರಿನ ಬೆಲೆ ನಲವತ್ತು ಲಕ್ಷದಿಂದಲೇ ಆರಂಭವಾಗುತ್ತದೆ..
ಸಾಮಾನ್ಯವಾಗಿ ಶ್ರೀಮಂತರ ಸಿಂಬಲ್ ಆಗಿ ಗುರುತಿಸಿಕೊಂಡಿರುವ ಈ ಕಾರು ಈಗ ಕ್ರೈಂ ಸ್ಟೋರಿಯಲ್ಲೂ ಎಂಟ್ರಿ ಕೊಟ್ಟಿದೆ.! ಶಾಕ್ ಆಗೋ ವಿಚಾರ ಏನು ಗೊತ್ತಾ..?
ಶಿವಮೊಗ್ಗದ ಕಳ್ಳರ ಗ್ಯಾಂಗೊಂದು ಇದೇ ಪಾರ್ಚೂನರ್ ಕಾರಿನಲ್ಲಿ ಹುಬ್ಬಳ್ಳಿಗೆ ಬಂದು, ತಡರಾತ್ರಿ ಬೀದಿಗಳಲ್ಲಿ ಮಲಗಿದ್ದ ಬಸವಣ್ಣಗಳನ್ನು ಕಾರಿನಲ್ಲಿ ತುಂಬಿಕೊಂಡು ಕಳ್ಳತನ ಮಾಡುತ್ತಿದ್ದರಂತೆ..!

ಪೊಲೀಸರ ಖಡಕ್ ಆಕ್ಷನ್.!
ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಚಾಕಚಕ್ಯದಿಂದ ಬೆನ್ನಟ್ಟಿ, ಕಳ್ಳತನಕ್ಕೆ ಬಳಸಿದ ಪಾರ್ಚೂನರ್ ಕಾರನ್ನು ವಶಪಡಿಸಿಕೊಂಡು ಮುಬಾರಕ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ..
ಇನ್ನೂ ದೊಡ್ಡ ಗ್ಯಾಂಗ್ ಹಿನ್ನಲೆ!ಈ ಗ್ಯಾಂಗ್‌ನಲ್ಲಿ ಇನ್ನೂ ಹಲವರು ಸೇರಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಂದೇಶ ಸ್ಪಷ್ಟ: ದುಬಾರಿ ಕಾರು ಇದ್ದರೆ ಮಾನ್ಯತೆ ಸಿಗೋದಿಲ್ಲ… ಅದರಲ್ಲಿ ಮಾಡುವ ಕೆಲಸವೇ ಮನುಷ್ಯನ ಬೆಲೆ ತೋರಿಸುತ್ತದೆ!
bigtvnews | Hubli Dharwad News | Kannada News | Karnataka News Hubli News | News In Hubli | Local news

