Breaking News

ಪತ್ನಿ ಸಾವನ್ನಪ್ಪಿದ ಎರಡೇ ದಿನದಲ್ಲಿ ಮನನೊಂದು ಪತಿ ಆತ್ಮಹತ್ಯೆ


ಅಥಣಿ: ಅನಾರೋಗ್ಯದಿಂದ ಪತ್ನಿ ಸಾವನ್ನಪ್ಪಿದ ಎರಡೇ ದಿನದಲ್ಲಿ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಝುಂಜರವಾಡ ಗ್ರಾಮದ ಸದಾಶಿವ ರಾಮಪ್ಪ ಕಾಂಬಳೆ (26) ಮನೆಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಕೂಡಲೇ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ತಡರಾತ್ರಿ ಸಾವನ್ನಪ್ಪಿದ್ದಾರೆ.

ಇನ್ನು ಕೇವಲ‌ ಎರಡು ದಿನಗಳ ಹಿಂದಷ್ಟೇ ಸದಾಶಿವ ಪತ್ನಿ ರೂಪಾ ಕಾಂಬಳೆ ಅನಾರೋಗ್ಯದಿಂದ ನಿಧನರಾಗಿದ್ದರು. ಇದರಿಂದ ಮನನೊಂದಿದ್ದ ಪತಿ ಸದಾಶಿವ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಇಬ್ಬರೂ ಸಾವಿನಲ್ಲಿ ಒಂದಾಗಿದ್ದಾರೆ. ಇನ್ನು ಈ ಜೋಡಿಗೆ ಮದುವೆಯಾಗಿ ಕೇವಲ ಎರಡೇ ವರ್ಷವಾಗಿತ್ತು. ಬಾಳಿ ಬದುಕಬೇಕಿದ್ದ ಜೋಡಿಯ ಬದುಕು ಇಷ್ಟು ಬೇಗ ಕೊನೆಯಾಗಿರುವುದಕ್ಕೆ ಗ್ರಾಮಸ್ಥರು ಮಮ್ಮಲ ಮರುಗಿದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *