ಉಡುಪಿ: ಕಾರ್ಕಳ ತಾಲ್ಲೂಕಿನ ಕಸಬ ಗ್ರಾಮದಲ್ಲಿ ಜಾಗದ ತಕರಾರಿಗೆ ಸಂಬಂಧಿಸಿ ನಡೆದ ಜಗಳದ ವೇಳೆ ಅಣ್ಣನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಹೆರಾಲ್ಡ್ ಡಿಸೋಜ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರಿಚರ್ಡ್ ಡಿಸೋಜ ಮತ್ತು ಅವರ ತಮ್ಮ ಹೆರಾಲ್ಡ್ ಡಿಸೋಜರಿಗೆ ಕಾರ್ಕಳ ತಾಲ್ಲೂಕಿನ ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ವಾಸ ಇರುವ ಮನೆಯ ಹಾಗೂ ಜಾಗದ ಬಗ್ಗೆ ತಕರಾರು ಇದ್ದು, ಇದೇ ವಿಚಾರಕ್ಕೆ ಸಂಬಂಧಿಸಿ ಮೇ 2ರಂದು ಗಲಾಟೆ ಆಗಿತ್ತು. ಆ ವೇಳೆ ಹೆರಾಲ್ಡ್ ಡಿಸೋಜನು ರಿಚಾರ್ಡ್ ಡಿಸೋಜರಿಗೆ ಮರದ ರೀಪಿನಿಂದ ಹೊಡೆದು ಕೊಲೆ ಮಾಡಿರುವುದಾಗಿದೆ ದೂರಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

