Breaking News

ಸಹೋದರರ ಜಾಗ ತಕರಾರು: ಕತ್ತಿ ದಾಳಿ – ಒಬ್ಬರಿಗೆ ಗಾಯ, ಪ್ರಕರಣ ದಾಖಲು

ಸಿದ್ದಾಪುರ: ಸಹೋದರರಿಬ್ಬರ ನಡುವೆ ಜಾಗದ ಗಡಿ ಗುರುತಿನ ವಿಷಯದಲ್ಲಿ ಜಗಳ ನಡೆದು, ಒಬ್ಬ ಕತ್ತಿಯಿಂದ ಕಡಿದು ಗಾಯ ಮಾಡಿದ ಘಟನೆ ಮೇ 4ರಂದು ಬೆಳ್ವೆಯಲ್ಲಿ ಸಂಭವಿಸಿದೆ. ಬೆಳ್ವೆ ಗ್ರಾಮದ ಮುರಳೀಧರ ಅಲ್ಸೆ(37) ಮತ್ತು ಪ್ರಕಾಶ ಅಲ್ಸೆ ನಡುವೆ ಜಾಗದ ತಕರಾರು ನಡೆಯುತ್ತಿತ್ತು. ಮೇ 4ರಂದು ಮುರಳೀಧರ ಅಲ್ಸೆ ಅವರು ತಮ್ಮ ಜಾಗದ ಗಡಿಯಲ್ಲಿ ಬೇಲಿಕಂಬವನ್ನು ಸರಿಪಡಿಸುತ್ತಿದ್ದಾಗ, ಪ್ರಕಾಶ ಅಲ್ಸೆ ಅಲ್ಲಿಗೆ ಬಂದು ಈ ಜಾಗ ತನಗೆ ಬರುತ್ತದೆ ಎಂದು ಜಗಳ ತೆಗೆದು ಮುರಳೀಧರ ಅಲ್ಸೆ ಅವರಿಗೆ ಕತ್ತಿಯಿಂದ ಹಲ್ಲೆ ನಡೆಸಿದರು. ಮುರಳೀಧರ ಅವರ ಬೊಬ್ಬೆ ಕೇಳಿ ಪತ್ನಿ ವೈಶಾಲಿ ಬಂದಾಗ ಪ್ರಕಾಶ ಅಲ್ಸೆ ಕತ್ತಿ ಎಸೆದು ಕೊಲೆ ಬೆದರಿಕೆ ಹಾಕಿ ತೆರಳಿದ ಎಂದು ದೂರಲಾಗಿದೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ RFO ಲೋಕಾಯುಕ್ತ ಬಲೆಗೆ

ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ …

Leave a Reply

Your email address will not be published. Required fields are marked *