ಹುಬ್ಬಳ್ಳಿ: ಆಪರೇಷನ್ ಕಮಲ ಮಾಡಿ ಬಿಜೆಪಿಯವರು ಸರಕಾರ ರಚಿಸುತ್ತಾರೆ ಎನ್ನುವ ನಂಬಿಕೆ ನನಗಿಲ್ಲ. ನನಗೆ ಬಂದ ಮಾಹಿತಿಯ ಪ್ರಕಾರ, ಬಿಜೆಪಿಯವರು ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸಿ ರಾಷ್ಟ್ರಪತಿ ಆಡಳಿತ ಹೇರಲು ಮುಂದಾಗಿದ್ದಾರೆ. ಬಳಿಕ ಚುನಾವಣೆ ಗೆ ಹೋಗಲು ಬಿಜೆಪಿಯವರು ಸಿದ್ದತೆ ನಡೆಸಿದ್ದಾರೆ. ಲೋಕ ಸಭೆಯಲ್ಲಿ ಸಿಕ್ಕ ಗೇಲುವಿನಿಂದ , ವಿಧಾನ ಸಭೆ ಚುನಾವಣೆ ಗೆ ಹೋದರೆ 150 ಸ್ಥಾನಗಳನ್ನ ಸುಲಭವಾಗಿ ಗೆಲ್ಲಬಹುದು ಎನ್ನುವ ಲೆಕ್ಕ ಚಾರದಲ್ಲಿ ಬಿಜೆಪಿ ನಾಯಕರಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಎಲ್ಲರು ಮಂತ್ರಿ ಆಗಬೇಕು ಎನ್ನುವವರೆ, ಇದು ಸಾದ್ಯವಿಲ್ಲ. ಜೆಡಿಎಸ್ ಕಾಂಗ್ರೆಸ್ ನವರು ಒಗ್ಗಟ್ಟಿನಿಂದ ಸರಕಾರ ನಡೆಸಿದ್ರೆ ಒಳ್ಳೆಯದು, ಇಲ್ಲದಿದ್ದರೆ ಕಷ್ಟ. ಮೈತ್ರಿಯಲ್ಲಿ ಹೆಚ್ಚುಕಡಿಮೆ ಆಗಿದೆ, ಭಿನ್ನಾಭಿಪ್ರಾಯ ಮರೆತು ಎಲ್ಲರು ಒಗ್ಗಟ್ಟಾಗಿದ್ದಾರೆ, ಮೈತ್ರಿಯಲ್ಲಿ ಅಪಸ್ವರ ಬಾರದಂತೆ ನೋಡಿಕೊಳ್ಳಬೇಕು. ನಾನು ಸಹ ಮಂತ್ರಿಯಾಗಿಲ್ಲ, ನಾನು ಎಲ್ಲ ತ್ಯಾಗಕ್ಕು ಸಿದ್ದ, ಸರಕಾರ ಒಳ್ಳೆಯ ರೀತಿಯಲ್ಲಿ ನಡೆಯಬೇಕು, ಅದಕ್ಕಾಗಿ ಉಳಿದವರು ತ್ಯಾಗಕ್ಕೆ ಮುಂದಾಗಲಿ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸವಾಲಾಗಿ ಸ್ವೀಕರಿಸಿಕೊಂಡು ಗೊಂದಲಗಳನ್ನ ಬಗೆಹರಿಸಲಿ. ಕೆಲವು ಸಚಿವರು ರಾಜೀನಾಮೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಹೊಸಬರಿಗೆ ಅವಕಾಶ ಮಾಡಿಕೊಡಲಿ. ಇಂತಹ ಕ್ಲಿಷ್ಟಕರವಾದ ಸ್ಥಿತಿಯಲ್ಲಿ ಸರಕಾರ ನಡೆಯಬೇಕಾದರೆ, ಕೇಲವರು ತ್ಯಾಗ ಮಾಡಲೇಬೇಕು, ಇಲ್ಲದಿದ್ದರೆ ಕಷ್ಟ. ಈಗಲು ಕಾಲ ಮಿಂಚಿಲ್ಲ ರಮೇಶ ಜಾರಕಿಹೋಳಿ ಯನ್ನ ಕರೆದು ಮಾತನಾಡಿ ಎಂದು ಸಲಹೆ ನೀಡಿದರು…
bigtvnews | Hubli Dharwad News | Kannada News | Karnataka News Hubli News | News In Hubli | Local news





