Breaking News

ಮನೆಯವರನ್ನು ಭೇಟಿಯಾಗಲು ಭರತ್ತಿದ್ದ ಯೋಧ ಸ್ಮಶಾನ ಸೇರಿದ


ಬೆಳಗಾವಿ : ಜಿಲ್ಲೆಯ ನಿಪ್ಪಾಣಿಯ ಯೋಧರು ಮೃತಪಟ್ಟಿರುವ ಘಟನೆ , ಉತ್ತರ ಪ್ರದೇಶದ ತುಂಡ್ಲಾ ರೈಲು ನಿಲ್ದಾಣದಲ್ಲಿ ನಡೆದಿದೆ.

45 ವರ್ಷದ ರಾಜೇಂದ್ರ ಪಾಂಡುರಂಗ ಕುಂಬಾರ ಮೃತ ಯೋಧರಾಗಿದ್ದಾರೆ. ನಿಪ್ಪಾಣಿಯ ಭಾರತೀಯ ಸೇನೆಯ ಯೋಧ ರಾಜೇಂದ್ರ ಪಾಂಡುರಂಗ ಅಪಘಾತದಲ್ಲಿ ಉತ್ತರ ಪ್ರದೇಶದಲ್ಲಿ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ.

ಕಳೆದ 22 ವರ್ಷಗಳಿಂದ ಇವರು ಭಾರತೀಯ ಸೇನೆಯಲ್ಲಿ ಯೋಧನಾಗಿ ರಾಜೇಂದ್ರ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳಷ್ಟೆ ದೆಹಲಿಯಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ ಗೆ ವರ್ಗವಾಗಿದ್ದ ಯೋಧರು ಮನೆಗೆ ಬರಲು 15 ದಿನ ರಜೆ ಪಡೆದಿದು ಊರಿನತ್ತ ಪ್ರಯಾಣ ಬೆಳೆಸಿದ್ದರು..

ತುಂಡ್ಲಾ ರೈಲು ನಿಲ್ದಾಣದಲ್ಲಿ ಒಂದು ರೈಲು ಇಳಿದು ಮತ್ತೊಂದು ರೈಲು ಹತ್ತುವಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ. ತುಂಡ್ಲಾದಿಂದ ದೆಹಲಿಗೆ ಬಂದಿರುವ ರಾಜೇಂದ್ರ ಕುಂಬಾರ ಅವರ ಪಾರ್ಥಿವ ಶರೀರ ತರಲಾಗಿದ್ದು, ನಾಳೆ ಬೆಳಗ್ಗೆಯಷ್ಟರಲ್ಲಿ ದೆಹಲಿಯಿಂದ ಬೆಳಗಾವಿಗೆ ತರುವ ಸಾಧ್ಯತೆಯಿದೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *