Breaking News

ಮೈಸೂರಿನಲ್ಲಿ ಮನೆ ಕಳವು: 60 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಮೈಸೂರು:ಸಿದ್ದಾರ್ಥನಗರ ನಿವಾಸಿ ಪಂಕಜ್ ಜೈನ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಪಂಕಜ್ ಜೈನ್ ಮೇ 2 ರಂದು ಕುಟುಂಬ ಸಹಿತ ರಾಜಸ್ತಾನಕ್ಕೆ ಕುಟುಂಬದವರ ವಿವಾಹಕ್ಕೆ ತೆರಳಿದ್ದರು. ಗುರುವಾರ ಮನೆಗೆ ಆಗಮಿಸಿದ ಸಂದರ್ಭ ಮನೆಯಲ್ಲಿ ಕಳವು ನಡೆದಿರುವುದು ಕಂಡು ಬಂತು. ಪಂಕಜ್ ಜೈನ್ ಅವರು ಮನೆಯ ಮುಂಬಾಗಿಲಿನ ಡೋರ್‌ಲಾಕ್ ತೆರೆದು ಮನೆಯೊಳಗೆ ಪ್ರವೇಶಿಸಿದಾಗ ಮೊದಲ ಮಹಡಿಗೆ ಹೋದಾಗ ರೂಮ್‌ನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂತು. ನಮತರ ನಂತರ ಕಬೋರ್ಡ್ ನೋಡಿದಾಗ ಅಲ್ಲಿ ಇಟ್ಟಿದ್ದ 10 ಲಕ್ಷ ರೂ. ನಗದು ಇರಲಿಲ್ಲ. ಕೆಳ ಮಹಡಿಯ ರೂಮ್ಗೆ ಬಂದು ನೋಡಿದಾಗ ರೂಮ್ನ ಲಾಕರ್‌ನಲ್ಲಿಟ್ಟಿದ್ದ 6 ಚಿನ್ನದ ಬಳೆಗಳು, 2 ಚಿನ್ನದ ನಕ್ಲೆಸ್, ಒಂದು ಚಿನ್ನದ ಸರ, ಒಂದು ಚಿನ್ನದ ಮಂಗಳಸೂತ್ರ, 8 ಚಿನ್ನದ ಉಂಗುರಗಳು, 4 ಜೊತೆ ಚಿನ್ನದ ಓಲೆಗಳು (ಒಟ್ಟು 350 ಗ್ರಾಂ) ಹಾಗೂ 20 ಕೆ.ಜಿ ತೂಕದ ಬೆಳ್ಳಿಗಟ್ಟಿಗಳು ಕಳುವಾಗಿದೆ. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *