Breaking News

ಖಾಕಿ ಹೆಸರಲ್ಲಿ ಹಫ್ತಾ ದಂಧೆ! ಎಸ್ಪಿ ಗನ್‌ಮ್ಯಾನ್ ಕೃತ್ಯಕ್ಕೆ ಪೊಲೀಸ್ ಇಲಾಖೆ ಶಾಕ್!

ಖಾಕಿ ಮೇಲಿನ ನಂಬಿಕೆಗೆ ಕಲೆ”…

ಖಾಕಿಯೊಳಗಿನ ಕಪ್ಪು ಮುಖ ಬಯಲು ಪೊಲೀಸರಿಗೆ ಭಾರೀ ಮುಜುಗರ!

ಒಬ್ಬ ಗನ್‌ಮ್ಯಾನ್ ತಪ್ಪಿಗೆ ನಿಷ್ಠಾವಂತ ಪೊಲೀಸರ ಗೌರವಕ್ಕೆ ಕಲೆ!

ಬಳ್ಳಾರಿಯಲ್ಲಿ ಎಸ್ಪಿ ಗನ್‌ಮ್ಯಾನ್ ದಂಧೆ ಬಯಲು!

ಜನರು ಪೊಲೀಸರನ್ನು ನೋಡಿದಾಗ ಭದ್ರತೆ ನೆನಪಾಗಬೇಕು… ಆದರೆ ಬಳ್ಳಾರಿಯಲ್ಲಿ ನಡೆದ ಈ ಘಟನೆ ಜನರ ಮನಸ್ಸಿನಲ್ಲಿ ಭಯ ಮತ್ತು ಅನುಮಾನ ಹುಟ್ಟಿಸುವಂತಾಗಿದೆ. ಕಾನೂನು ಕಾಯಬೇಕಾದ ಖಾಕಿಯಲ್ಲೇ ಕೆಲವರು ಕಪ್ಪು ದಂಧೆಗೆ ಇಳಿದರೆ, ನಿಷ್ಠೆಯಿಂದ ಕೆಲಸ ಮಾಡುವ ನೂರಾರು ಪೊಲೀಸರ ಗೌರವಕ್ಕೂ ಧಕ್ಕೆ ಬರುತ್ತದೆ ಎಂಬುದಕ್ಕೆ ಈ ಪ್ರಕರಣ ಜೀವಂತ ಉದಾಹರಣೆ…

ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಗಳನ್ನು ಅಡ್ಡಗಟ್ಟಿದ ಕೆಲವರು, ತಮ್ಮನ್ನು ಎಸ್ಪಿ ಸ್ಕ್ವಾಡ್” ಅಧಿಕಾರಿಗಳೆಂದು ಹೇಳಿಕೊಂಡು ಚಾಲಕರಿಗೆ ಬೆದರಿಕೆ ಹಾಕುತ್ತಾರೆ. ಹಣ ಕೊಡದಿದ್ದರೆ ಲಾರಿ ಸೀಜ್… ಜೈಲು ಖಚಿತ” ಎಂದು ದಬ್ಬಾಳಿಕೆ ನಡೆಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಾರೆ…

ಆದರೆ ಕಥೆಯ ದೊಡ್ಡ ಟ್ವಿಸ್ಟ್ ಏನೆಂದರೆ — ಈ ಗ್ಯಾಂಗ್‌ನಲ್ಲಿದ್ದವನೇ ಎಸ್ಪಿಯ ಗನ್‌ಮ್ಯಾನ್..!

ಹೌದು… ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದ ಈ ಪ್ರಕರಣದಲ್ಲಿ ದೇವರಾಜ್ ಎಂಬ ಗನ್‌ಮ್ಯಾನ್ ಹೆಸರು ಕೇಳಿಬಂದ ಕ್ಷಣಕ್ಕೆ ಪೊಲೀಸ್ ಇಲಾಖೆಯೇ ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ, ಎಸ್ಪಿಯವರ ಭದ್ರತೆಯಲ್ಲಿರಬೇಕಾದ ವ್ಯಕ್ತಿಯೇ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದಾನೆ ಎನ್ನುವುದು ಜನರಿಗೆ ಶಾಕ್ ನೀಡಿದೆ…

ಈ ಘಟನೆ ಕೇವಲ ಒಂದು ಕ್ರೈಂ ಕೇಸ್ ಅಲ್ಲ…

ಇದು ಖಾಕಿಯ ಮೇಲಿನ ನಂಬಿಕೆಗೆ ಬಿದ್ದ ದೊಡ್ಡ ಗಾಯ…

ಒಬ್ಬ ಪೊಲೀಸನ ತಪ್ಪು, ನಿಷ್ಠೆಯಿಂದ ರಾತ್ರಿ-ಹಗಲು ದುಡಿಯುವ ಅನೇಕ ಪ್ರಾಮಾಣಿಕ ಅಧಿಕಾರಿಗಳ ಗೌರವವನ್ನೇ ಮಣ್ಣಿನಲ್ಲಿ ಮಿಶ್ರಣ ಮಾಡುತ್ತದೆ. ರಸ್ತೆಯಲ್ಲಿ ಜನರ ಸುರಕ್ಷತೆಗಾಗಿ ಜೀವಪಣ ತೊಟ್ಟು ಕೆಲಸ ಮಾಡುವ ಸತ್ಯನಿಷ್ಠ ಪೊಲೀಸರಿದ್ದಾರೆ. ಆದರೆ ಇಂತಹ ಕೆಲವರ ದುರಾಸೆ, ಸಂಪೂರ್ಣ ಇಲಾಖೆಯನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ…

ಈ ಪ್ರಕರಣದಲ್ಲಿ ಮತ್ತೊಂದು ಮಹತ್ವದ ವಿಷಯ ಏನೆಂದರೆ ದೂರು ಬಂದ ತಕ್ಷಣ ಎಸ್ಪಿ ಸುಮನ್ ಡಿ. ಪನ್ನೇಕರ್ ತನಿಖೆಗೆ ಆದೇಶಿಸಿದ್ದು, ತಮ್ಮದೇ ಗನ್‌ಮ್ಯಾನ್ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು. ಇದು ಇಲಾಖೆಯಲ್ಲಿ ಇನ್ನೂ ನಿಷ್ಠೆ ಜೀವಂತವಾಗಿದೆ ಎಂಬ ಸಂದೇಶ ನೀಡುತ್ತದೆ…

ಆದರೆ ಪ್ರಶ್ನೆ ಇನ್ನೂ ಉಳಿದಿದೆ…

ಖಾಕಿ ಧರಿಸಿದ ಕೆಲ ಕಪ್ಪು ಕುರಿಗಳಿಂದ ಪೊಲೀಸ್ ಇಲಾಖೆಯ ಗೌರವ ಎಷ್ಟು ಬಾರಿ ಹಾಳಾಗಬೇಕು..?

Share News

About Shaikh BigTv

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *