ಭೂತಾಯಿ ಒಡಲಿಗೆ ಕನ್ನ ಹಾಕುವ ಖದೀಮರಿಗೆ ಇದೆ ರಕ್ಷಕ ಬೇಲಿ
ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ಉಪಗ್ರಹ ಆಧಾರಿತ ಲೊಕೇಟಿಂಗ್ ಮತ್ತು ನ್ಯಾವಿಗೇಟಿಂಗ್ ಆಧಾರಿತ ಸುದ್ದಿ..
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅನಧಿಕೃತ ಮರಳು ಮಾಫಿಯಾ ಜೋರಾಗಿ ನಡೆಯುತ್ತಿದೆ. ನಗರದ ಅನೇಕ ಕಡೆಗಳಲ್ಲಿ ಮರಳು ಅಡ್ಡಾಗಳು ತಲೆ ಎತ್ತಿ ನಿಂತಿವೆ.ಹೌದು… ವಾಣಿಜ್ಯ ನಗರಿ ಹುಬ್ಬಳ್ಳಿ ಛೋಟಾ ಮುಂಬಯಿ ಎನಿಸಿಕೊಳ್ಳುವ ಈ ನಗರದಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಮರಳು ಮಾರಾಟದ ಅಡ್ಡೆಗಳು ತಲೆ ಎತ್ತಿವೆ. ದೊಡ್ಡ ನಗರಗಳಲ್ಲಿ ನಡೆಯುವ ಎಲ್ಲಾ ದಂಧೆಗಳು ಕೂಡ ಸದ್ದಿಲ್ಲದೇ ಹುಟ್ಟಿಕೊಳ್ಳುತ್ತಿವೆ. ವಾಣಿಜ್ಯ ನಗರಿಯಲ್ಲಿ ಮರಳು ದಂಧೆಯ ಕಾರುಬಾರು ಜೋರಾಗಿಯೇ ನಡೆದಿದೆ. ಹುಬ್ಬಳ್ಳಿಯ ಕಾರವಾರ ರಸ್ತೆ, ವಿಶಾಲ ನಗರ, ಕೇಶ್ವಾಪುರ, ಗಬ್ಬೂರು ಬೈಪಾಸ್ ಇನ್ನೂ ಹಲವೆಡೆ ಸದ್ದಿಲ್ಲದೇ ನಡೆಯುತ್ತಿರುವ ಮರಳು ಮಾರಾಟದ ದಂಧೆ ಬಗ್ಗೆ ಸ್ವಲ್ಪ ಅಧಿಕಾರಿಗಳು ಕೂಡ ಗಮನ ಹರಿಸಬೇಕಾಗಿದೆ. ಆದಷ್ಟು ಬೇಗ ತಲೆ ಎತ್ತಿ ನಿಂತಿರುವ ಈ ಮರಳು ಮಾಫಿಯಾ ಬಗ್ಗೆ ಕ್ರಮ ಜರುಗಿಸಿ ದಂಧೆಕೋರರ ಕೈಗೆ ಕೋಳ ಹಾಕಿ ಸಂಪೂರ್ಣ ಮರಳುಗಾರಿಕೆಗೆ ಬ್ರೇಕ್ ಹಾಕಬೇಕಿದೆ. ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಮರಳು ದಂಧೆಗೆ ಸಂಪೂರ್ಣ ಕಡಿವಾಣ ಹಾಕ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

