Breaking News

ನಾಳೆಯಿಂದ ನೇಪಾಳ ರುದ್ರಾಕ್ಷಗಳ ಪ್ರದರ್ಶನ, ಮಾರಾಟ

ಹುಬ್ಬಳ್ಳಿ : ಮುಂಬೈನ ರುದ್ರಶಕ್ತಿ ಸಹಯೋಗದಲ್ಲಿ ನೇಪಾಳದ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟವನ್ನು ನಾಳೆ ದಿ.16ರಿಂದ 21ರವರೆಗೆ ನಗರದ ಸರ್ಕ್ಯುಟ ಹೌಸ್ ರಸ್ತೆಯಲ್ಲಿರುವ ಹೊಟೇಲ್ ರೇವಣಕರ ಕಂಪರ್ಟ್ಸ ನಲ್ಲಿ ಏರ್ಪಡಿಸಲಾಗಿದೆ ಎಂದು ರುದ್ರಶಕ್ತಿ ರುದ್ರಾಕ್ಷ ಸಂಸ್ಥೆಯ ಸಂಸ್ಥಾಪಕರಾದ ಸುಮೀರ ಕಾಕೋಡಕರ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿಂದು ಪತ್ರಿಕಾಗೋಷ್ಢಿಯಲ್ಲಿ ಮಾತನಾಡಿದ ಅವರು, ಈ ರುದ್ರಾಕ್ಷಿಗಳ ಮಾರಾಟ ಮತ್ತು ಪ್ರದರ್ಶನವನ್ನು ಹುಬ್ಬಳ್ಳಿ ಜನತೆಗಾಗಿ ಆಯೋಜಿಸಲಾಗಿದ್ದು ಇದು ಪ್ರತಿದಿನ ಬೆಳಿಗ್ಗೆ ೧೦ರಿಂದ ರಾತ್ರಿ 08 ಗಂಟೆವರೆಗೆ ನಡೆಯಲಿದೆ ಎಂದರು.ಗ್ರಾಹಕರಿಗೆ ಅಸಲಿ ಹಾಗೂ ನಕಲಿ ರುದ್ರಾಕ್ಷಿಗಳ ನಡುವಿನ ಭಿನ್ನತೆಯನ್ನು ವಿವರಿಸುವ ಮೂಲಕ ಯಾವ ರುದ್ರಾಕ್ಷಿಯನ್ನು ಯಾವಾಗ ಧರಿಸಬೇಕುಎಂಬುದರ ಬಗ್ಗೆ ಯಾವುದೇ ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೇ ವೇದ ಗಣಿತದ ಮೂಲಕ ಜನ್ಮರಾಶಿ, ನಕ್ಷತ್ರಗಳನ್ಮು ನೋಡಿ ಕ್ಷಣಾರ್ಧದಲ್ಲಿ ಹೆಳಲಾಗುವುದು ಎಂದರು.ಏಕಮುಖದಿಂದ ೨೧ಮುಖಗಳಿರುವ ವಿವಿಧ ಪ್ರಕಾರದ ರುದ್ರಾಕ್ಷಿಗಳಿದ್ದು, ಪ್ರಸ್ತುತ ಪ್ರದರ್ಶನ ಮಾರಾಟದಲ್ಲಿ ಒಂದರಿಂದ ಹದಿನಾರು ಮುಖಗಳ ರುದ್ರಾಕ್ಷಿಗಳನ್ನು ವಿಕ್ಷಿಸಬಹುದು ಮತ್ತು ಖರೀದಿಸಬಹುದು. ಆಸಕ್ತರು ಬೇಡಿಕೆ ಮಂಡಿಸಿದ್ದಲ್ಲಿ ಇತರೆ ಮೂಖಗಳ ರುದ್ರಾಕ್ಷಿಗಳನ್ನು ತರಿಸಿ ಕೊಡಲಾಗುವುದು. ವ್ಯಕ್ತಿಯ ಜನ್ಮ ದಿನಾಂಕ ಆಧರಿಸಿ ಯಾವ ರಾಶಿಗೆ ಯಾವ ಮುಖದ ರುದ್ರಾಕ್ಷಿ ಅಗತ್ಯ ಎಂಬುದರ ಕುರಿತು ನಿರ್ಧರಿಸಿ ಅಂತಹ ರುದ್ರಾಕ್ಷಿ ನೀಡಲಾಗುವುದು ಎಂದು ಅವರು ತಿಳಿಸಿದರು.ರುದ್ರಾಕ್ಷಿ ಬೆಲೆ ಕನಿಷ್ಠ 50 ರಿಂದ ಒಂದೂವರೆ ಲಕ್ಷ ರೂ.ಗಳವರೆಗಿದ್ದು, ಅದೇ ರೀತಿ ಮಾಲೆಗಳಲ್ಲಿ ಸಿದ್ದ, ಸ್ಪಟಿಕ, ಜಪ, ತುಳಸಿ, ಶಿವ, ಜ್ಞಾನ, ಗಣಪತಿ ಹಾಗೂ ಸಾಲಿಗ್ರಾಮ ಮಾಲೆಗಳಿರುತ್ತವೆ ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ನಿಶಾತ್ ಕಾಕೋಡಕರ ಸೇರಿದಂತೆ ಇತರರು ಇದ್ದರು.

Share News

About admin

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *